ತಿರಂಗಗಾಗಿ ಬಡವರಿಂದ ಹಣ ವಸೂಲಿ : ವರುಣ್ ಗಾಂಧಿ ಆಕ್ಷೇಪ

ನವದೆಹಲಿ, ಆ.10- ನ್ಯಾಯಬೆಲೆ ಅಂಗಡಿಯಲ್ಲಿ ಬಲವಂತವಾಗಿ ತ್ರಿವರ್ಣ ಧ್ವಜ ಹಾರಾಟ ಮಾಡುತ್ತಿರುವುದು, ಅದಕ್ಕಾಗಿ ಬಡ ಜನರಿಂದ ಹಣ ವಸೂಲಿ ಮಾಡುವುದು ನಾಚಿಕೆಗೇಡು ಎಂದು ಬಿಜೆಪಿಯ ಸಂಸದ ವರುಣ್ಗಾಂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಬೆಲೆ ಅಂಗಡಿ ಮುಂದೆ ಬಡವರ ಅಸಹಾಯಕ ಹೇಳಿಕೆಗಳ ಮಾಧ್ಯಮ ವರದಿಯನ್ನು ಟ್ವೀಟರ್ನಲ್ಲಿ ಪೊೀಸ್ಟ್ ಮಾಡಿರುವ ಅವರು, 75ನೇ ವರ್ಷದ ಸ್ವಾತಂತ್ರ್ಯೋತ್ಸವ ಬಡವರಿಗೆ ಹೊರೆಯಾಗುತ್ತಿರುವುದು ದುರಾದೃಷ್ಟ ಎಂದಿದ್ದಾರೆ. ನ್ಯಾಯಬೆಲೆ ಅಂಗಡಿಯಲ್ಲಿ 20ರೂ.ಗೆ ರಾಷ್ಟ್ರಧ್ವಜವನ್ನು ಮಾರಾಟ ಮಾಡಲಾಗುತ್ತಿದೆ.ಧ್ವಜ ಖರೀದಿ ಮಾಡದೇ ಇರುವವರಿಗೆ ಪಡಿತರ ನೀಡುವುದಿಲ್ಲ ಎಂದು ಅಂಗಡಿಯವನು ಹೇಳಿಕೆ […]