ಪದೇ ಪದೇ ಸ್ಯಾಟಲೈಟ್ ಕರೆ : ಕರಾವಳಿ ಜನರಲ್ಲಿ ಆತಂಕ

ಬೆಂಗಳೂರು,ನ.27- ಇತ್ತೀಚೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಪದೇ ಪದೇ ಸ್ಯಾಟಲೈಟ್ ಫೋನ್‍ನಿಂದ ವಿದೇಶಕ್ಕೆ ಕರೆ ಹೋಗುತ್ತಿರುವುದು ಜನತೆಯನ್ನು ಆತಂಕಕ್ಕೀಡು ಮಾಡಿದೆ. ವಿಶೇಷವಾಗಿ ಮಲೆನಾಡು, ಕರಾವಳಿ ತೀರಾಪ್ರದೇಶ,ಕಿತ್ತೂರು ಕರ್ನಾಟಕ, ಮಧ್ಯಕರ್ನಾಟಕ ಸೇರಿದಂತೆ ದಟ್ಟ ಅರಣ್ಯ ಪ್ರದೇಶಗಳಲ್ಲಿ ಅನಾಮಧೇಯ ವ್ಯಕ್ತಿಗಳು ಸ್ಯಾಟಲೈಟ್ ಫೋನ್ ಬಳಕೆ ಮಾಡುತ್ತಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಹೇಳಿ ಕೇಳಿ ಕರ್ನಾಟಕದ ವಿವಿಧ ಪ್ರದೇಶಗಳು ಅಂತಾರಾಷ್ಟ್ರೀಯ ಭಯೋತ್ಪಾದಕರ ಹಿಟ್‍ಲಿಸ್ಟ್‍ನಲ್ಲಿದೆ. ಇಂತಹ ಸಂದರ್ಭದಲ್ಲೇ ಸ್ಯಾಟಲೈಟ್ ಫೋನ್‍ಗಳು ರಿಂಗಣಿಸುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಎನ್‍ಐಎ ತನಿಖಾ ತಂಡದ ಮೂಲಗಳ ಪ್ರಕಾರ ಚಿಕ್ಕಮಗಳೂರಿನ […]