ಭಾರತ ಮಾನವೀಯತೆ ಪರ ಸದಾ ನಿಲ್ಲುತ್ತದೆ: ಜೈಶಂಕರ್

ನವದೆಹಲಿ,ಫೆ.8- ಟರ್ಕಿಯೊಂದಿಗಿನ ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಭಾರತ ಮಾನವೀಯತೆ ಪರವಾಗಿ ನಿಲ್ಲುತ್ತದೆ. ಸಂಕಷ್ಟದಲ್ಲಿರುವ ಆ ದೇಶಕ್ಕೆ ನೆರವಾಗುತ್ತದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದರು. ಟರ್ಕಿಗೆ ಪರಿಹಾರ ಒದಗಿಸುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ವಸುದೈವ ಕುಟುಂಬಕಂ ನೀತಿಯ ಪ್ರಕಾರ ಭಾರತವು ಮಾನವೀಯತೆ ಪರ ಸದಾ ನಿಲ್ಲುತ್ತದೆ. ಪ್ರಕತಿ ವಿಕೋಪದಂತಹ ಸಂದರ್ಭದಲ್ಲಿ ಅವರಿಗೆ ನೆರವಾಗುವುದು ಎಂದರು. ಭೂಕಂಪ ಪೀಡಿತ ಟರ್ಕಿ ರಾಷ್ಟ್ರಕ್ಕೆ ಭಾರತ ಇಲ್ಲಿಯವರೆಗೆ 30 ಹಾಸಿಗೆಗಳ ಕ್ಷೇತ್ರ ಆಸ್ಪತ್ರೆಯನ್ನು ಸ್ಥಾಪಿಸಲು ಎನ್‍ಡಿಆರ್‍ಫ್ ಸಿಬ್ಬಂದಿ […]