ಕನ್ನಡಿಗ ಕೆ.ಎಲ್.ರಾಹುಲ್ ನೆರವಿಗೆ ಬಂದ ಗಂಭೀರ್

ನವದೆಹಲಿ,ಫೆ.25-ಕಳಪೆ ಫಾರ್ಮ್‍ನಿಂದಾಗಿ ಭಾರಿ ಟೀಕೆಗೆ ಗುರಿಯಾಗಿರುವ ಖ್ಯಾತ ಕ್ರಿಕೆಟ್ ಪಟು ಅಪ್ಪಟ ಕನ್ನಡಿಗ ಕೆ.ಎಲ್.ರಾಹುಲ್ ನೆರವಿಗೆ ಗೌತಮ್ ಗಂಭೀರ್ ಬಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದ ರಾಹುಲ್ ವಿರುದ್ಧ ಕನ್ನಡಿಗರೆ ಆಗಿರುವ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಸೇರಿದಂತೆ ಕೆಲವರು ಭಾರಿ ಟೀಕೆ ಮಾಡುತ್ತಿದ್ದಾರೆ. ರಾಹುಲ್ ಬದಲಿಗೆ ಇತ್ತಿಚೆಗೆ ಉತ್ತಮ ಆಟ ಪ್ರದರ್ಶಿಸುತ್ತಿರುವ ಶುಭಮನ್ ಗಿಲ್‍ಗೆ ಅವಕಾಶ ಮಾಡಿಕೊಡಬೇಕು ಎಂಬ ಕೂಗುಗಳು ಕೇಳಿ ಬರುತ್ತಿರುವ ಸಂದರ್ಭದಲ್ಲೇ ಮಾಜಿ ಕ್ರಿಕೆಟಿಗರಾಗಿ ಇದೀಗ […]