ಮೇಕೆದಾಟು ವಿಚಾರ ಸರ್ಕಾರದ ವಿರುದ್ಧ ಎಂ.ಬಿ.ಪಾಟೀಲ್ ಆರೋಪ

ಬೆಂಗಳೂರು,ಜ.12-ಮೇಕೆದಾಟು ಯೋಜನೆ ವಿಷಯದಲ್ಲಿ ಬಿಜೆಪಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದು, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉಡಾಫೆ ವರ್ತನೆ ತೋರಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ. ನಗರದ ಖಾಸಗಿ ಹೋಟೆಲ್‍ನಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯೋಜನೆಯ ಇತಿಹಾಸ, ಆರಂಭ, ಪ್ರಗತಿ ಸೇರಿದಂತೆ ಸಮಗ್ರ ವಿವರಗಳನ್ನು ದಾಖಲಾತಿ ಮತ್ತು ದಿನಾಂಕ ಸಹಿತವಾಗಿ ವಿವರಿಸಿದರು. 1997-98ರಲ್ಲೇ ಈ ಯೋಜನೆ ಪ್ರಸ್ತಾಪವಾಗಿತ್ತು. ಆದರೆ ಕಾವೇರಿ ನದಿನೀರಿನ ವಿವಾದ ನ್ಯಾಯಾಲಯದಲ್ಲಿದ್ದರಿಂದ ಇದು ಪ್ರಗತಿಯಾಗಿರಲಿಲ್ಲ. ನ್ಯಾಯಾೀಕರಣದ ತೀರ್ಪು ಪ್ರಕಟವಾಗಿ ಅದಕ್ಕೆ ಕೇಂದ್ರ ಸರ್ಕಾರ ಅಸೂಚನೆ ಹೊರಡಿಸಿದ […]