ಹಿರಿಯ ಮುತ್ಸದ್ದಿ ಎಚ್.ಡಿ. ಚೌಡಯ್ಯ ವಿಧಿವಶ
ಮಂಡ್ಯ, ಫೆ.16- ಜನತಾ ಶಿಕ್ಷಣ ಸಂಸ್ಥೆಯ (ಪಿಇಟಿ) ಮಾಜಿ ಅಧ್ಯಕ್ಷ, ಮಾಜಿ ಶಾಸಕ, ಹಿರಿಯ ಮುತ್ಸದ್ದಿ, ಎಚ್.ಡಿ. ಚೌಡಯ್ಯನವರು (94) ಮಂಗಳವಾರ ಮಧ್ಯರಾತ್ರಿ ನಿಧನರಾಗಿದ್ದಾರೆ. ಪತ್ನಿ ದೊಡ್ಡ ಲಿಂಗಮ್ಮನವರ ಅಗಲಿಕೆಯ ನಂತರ ಅವರ ಆರೋಗ್ಯ ತೀವ್ರವಾಗಿ ಕ್ಷೀಣಿಸಿತ್ತು. ನಿನ್ನೆ ರಾತ್ರಿ 2.30 ರ ಸುಮಾರಿಗೆ ಸ್ವಗ್ರಾಮ ಹೊಳಲು ಗ್ರಾಮದಲ್ಲಿ ಕೊನೆಯುಸಿರೆಳೆದರು. ಚೌಡಯ್ಯನವರಿಗೆ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು. ಅಪಾರ ಬಂಧು ಬಳU ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಇಂದು ಸಂಜೆ ಸ್ವಗ್ರಾಮವಾದ ಹೊಳಲು ಗ್ರಾಮದ ಅವರ ಅಲೆಮನೆ […]