ಮೋಜಿನ ಜೀವನಕ್ಕಾಗಿ ಬೈಕ್ ಕಳವು ಮಾಡುತ್ತಿದ್ದ ನಾಲ್ವರ ಬಂಧನ

ಬೆಂಗಳೂರು,ಫೆ.13-ಹ್ಯಾಂಡಲ್‍ಲಾಕ್ ಮುರಿದು ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಕೋಣನಕುಂಟೆ ಠಾಣೆ ಪೊಲೀಸರು 9 ಲಕ್ಷ ರೂ. ಬೆಲೆ ಬಾಳುವ ಒಟ್ಟು 18 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬನ್ನೇರುಘಟ್ಟ ಮುಖ್ಯರಸ್ತೆಯ ನಿವಾಸಿಗಳಾದ ಶ್ರೀನಿವಾಸ್(25), ವಿಕ್ರಮ್ ಕುಮಾರ(23), ಸಲೀಂ(21) ಮತ್ತು ತಮಿಳುನಾಡಿನ ಡೆಂಕಣಿಕೋಟೆ ನಿವಾಸಿ ಬಸಪ್ಪ(25) ಬಂಧಿತ ಆರೋಪಿಗಳು. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಜೆಪಿನಗರದ 8ನೇ ಹಂತದ ಜಂಬುಸವಾರಿ ದಿಣ್ಣೆ-ಗೊಟ್ಟಿಗೆರೆ ರಸ್ತೆಯ ಬಸ್ ನಿಲ್ದಾಣದ ಬಳಿ ಐವರು ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಹೊಂಚು […]