ಖೋಟಾ ನೋಟು ಮುದ್ರಣ-ಮಾರಾಟ : ನಾಲ್ವರು ಅಂತರರಾಜ್ಯ ಆರೋಪಿಗಳ ಸೆರೆ

ಬೆಂಗಳೂರು, ಜ.25- ಖೋಟಾ ನೋಟು ಮುದ್ರಣ ಮತ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ನಾಲ್ವರು ಅಂತರ್ ರಾಜ್ಯ ಆರೋಪಿಗಳನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿ 10.34 ಲಕ್ಷ ಮೌಲ್ಯದ ಖೋಟಾ ನೋಟುಗಳು, ಕಾರು, ನಾಲ್ಕು ಮೊಬೈಲ್ ಹಾಗೂ ಇನ್ನಿತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ಕಡಪ ಜಿಲ್ಲೆಯ ಚರಣ್ ಸಿಂಗ್, ರಜನಿ ಮತ್ತು ಅನಂತಪುರ ಜಿಲ್ಲೆಯ ಗೋಪಿನಾಥ್ ಹಾಗೂ ರಾಜು ಬಂತ ಆರೋಪಿಗಳು. ಉತ್ತರಹಳ್ಳಿ- ಕೆಂಗೇರಿ ಮುಖ್ಯರಸ್ತೆಯಲ್ಲಿ ಇಬ್ಬರು ಖೋಟಾ ನೋಟು ಚಲಾವಣೆ ಮಾಡಲು ಬರುತ್ತಿದ್ದಾರೆಂಬ ಮಾಹಿತಿ ಮೇರೆಗೆ ಎಎಸ್‍ಐ […]

ಮನೆಗಳ ಮುಂದೆ ನ್ಯೂಸ್ ಪೇಪರ್- ಕಸ ಗಮನಿಸಿ ಮನೆಗಳ್ಳತನ ಮಾಡುತ್ತಿದ್ದ ನಾಲ್ವರು ಸೆರೆ

ಬೆಂಗಳೂರು, ಜ. 5- ಬಾಗಿಲು ಮುಂಭಾಗ ದಿನ ಪತ್ರಿಕೆಗಳು ಮತ್ತು ಕಸ ಬಿದ್ದಿರುವುದನ್ನು ಗಮನಿಸಿ ಹಗಲು ಮತ್ತು ರಾತ್ರಿ ವೇಳೆ ಮನೆಗಳ ಬೀಗ ಮುರಿದು ಚಿನ್ನಾಭರಣ ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿ 15.95 ಲಕ್ಷ ಮೌಲ್ಯದ ಚಿನ್ನಾಭರಣಗಳು, ಕಾರು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆನೆಕಲ್ ತಾಲೂಕು ಚಂದಾಪುರದ ಸೂರ್ಯ ಸಿಟಿ ನಿವಾಸಿ ಗಣೇಶ ಅಲಿಯಾಸ್ ಟಚ್ಚು ಅಲಿಯಾಸ್ ವಿನಯ ಪ್ರಸಾದ್ ಅಲಿಯಾಸ್ ವಿಜಿ(23), ಚಿಕ್ಕಬಾಣವಾರದ ಲೋಹಿತ್(37), ನಾಯಂಡನಹಳ್ಳಿಯ ಗಂಗೊಂಡನಹಳ್ಳಿ ನಿವಾಸಿ […]

ಸಕಲೇಶಪುರದಲ್ಲಿ ಬಾಲಕಿ ಮೇಲೆ ಗ್ಯಾಂಗ್ ರೇಪ್..!

ಸಕಲೇಶಪುರ, ಡಿ.14- ಅಪ್ರಾಪ್ತ ಬಾಲಕಿ ಮೇಲೆ ನಾಲ್ವರು ಅತ್ಯಾಚಾರ ನಡೆಸಿದ ಪೈಶಾಚಿಕ ಕೃತ್ಯ ತಾಲೂಕಿನಲ್ಲಿ ಹೊರಬಂದಿದೆ. ಪ್ರಕರಣ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ, ಅತ್ಯಾಚಾರ, ಜಾತಿ ನಿಂದನೆ ಪ್ರಕರಣದಡಿ ನಾಲ್ವರನ್ನು ಬಂಧಿಸಲಾಗಿದೆ. ಸಕಲೇಶಪುರ ತಾಲೂಕಿನ ಗ್ರಾಮವೊಂದರಲ್ಲಿ 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಕಾಫಿ ತೋಟವೊಂದರ ಮಾಲೀಕ ಸುದರ್ಶನ್ ಸೇರಿದಂತೆ ಅದೇ ಗ್ರಾಮದ ಸ್ವಾಗತ್, ಪಾಪಣ್ಣ ಹಾಗೂ ಮತ್ತೋರ್ವ ಅಪ್ರಾಪ್ತ ಬಾಲಕನೊಬ್ಬನ ಮೇಲೆ ಬಾಲಕಿ ಮನೆಯವರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆ […]

ಟೀ ಅಂಗಡಿಗೆ ನುಗ್ಗಿ ಹಲ್ಲೆ ಮಾಡಿದ್ದ ನಾಲ್ವರು ಪುಂಡರು ಅಂದರ್

ಬೆಂಗಳೂರು, ಡಿ.10- ಟೀ ಅಂಗಡಿಗೆ ನುಗ್ಗಿ ಅಂಗಡಿಯಲ್ಲಿದ್ದವರ ಮೇಲೆ ಹಲ್ಲೆ ಮಾಡಿ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಹೆಚ್‍ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ, ಕಾರ್ತಿಕ್, ಸಲ್ಮಾನ್ ಮತ್ತು ಕಾರ್ತಿಕ್ ಎನ್. ಬಂಧಿತ ಆರೋಪಿಗಳು. ಬಂಧಿತರ ಪೈಕಿ ಮಂಜುನಾಥ ಅದೇ ಏರಿಯಾದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದು , ಸಮೀಪದಲ್ಲಿನ ಬೇಕರಿಯಲ್ಲಿ ಚೆನ್ನಾಗಿ ವ್ಯಾಪಾರವಾಗುತ್ತಿದ್ದರಿಂದ ಆತನ ಮೇಲೆ ದ್ವೇಷ ಸಾಧಿಸುತ್ತಿದ್ದನು. ರೌಡಿ ಕಾರಿನ ಮೇಲೆ ಗುಂಡಿನ ಸುರುಮಳೆಗೈದಿದ್ದ ಮೂವರ ಬಂಧನ ಈ ಜಿದ್ದಿನಿಂದ ಡಿ. 8ರಂದು ರಾತ್ರಿ ಬೇಕರಿಗೆ […]

ಅಲೆಮಾರಿ ಸೋಗಿನಲ್ಲಿ ಕಳ್ಳ ಸಾಗಣೆ, 4 ಕೋಟಿ ಮೊತ್ತದ ಮಾದಕ ವಶ

ಬೆಂಗಳೂರು, ಜು.13- ಅರಣ್ಯ ಪ್ರದೇಶದಲ್ಲಿ ಹ್ಯಾಶಿಶ್ ಆಯಿಲ್ ತಯಾರಿಸಿ ಡ್ರಗ್ ಪೆಡ್ಲರ್‍ಗಳಿಗೆ ಸರಬರಾಜು ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಅಂತರ್ ರಾಜ್ಯ ಡ್ರಗ್ ಕಳ್ಳ ಸಾಗಾಣಿಕೆ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 4 ಕೋಟಿ ಮೌಲ್ಯದ ನಿಷೇತ 5 ಕೆಜಿ ಹ್ಯಾಶಿಶ್ ಆಯಿಲ್ ಮತ್ತು 6 ಕೆಜಿ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಯಶಸ್ವಿಯಾಗಿದೆ. ಶ್ರೀನಿ ಅಲಿಯಾಸ್ ಶ್ರೀನಿವಾಸ, ಸತ್ಯವತಿ, ಮಲ್ಲೇಶ್ವರಿ ಮತ್ತು ಪ್ರಹ್ಲಾದ […]

ನಿಮ್ಮ ಹಣ ಡಬಲ್ ಮಾಡಿಕೊಡುವ ಆಫರ್ ಬಂದಿದೆ..? ಹಾಗಾದ್ರೆ ಇದನ್ನು ತಪ್ಪದೇ ಓದಿ

ಬೆಂಗಳೂರು, ಜ.29- ಜನಸಾಮಾನ್ಯರಿಗೆ ನಿವೇಶನ ಕೊಡಿಸುವುದಾಗಿ ಹಾಗೂ ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ಸುಲಿಗೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಸಿರುವ ಅಮೃತಹಳ್ಳಿ ಠಾಣೆಯ ಪೊಲೀಸರು, ಅವರ ಹಲವು ಹೈನಾತಿ ಕೃತ್ಯಗಳನ್ನು ಬಯಲಿಗೆ ಎಳೆದಿದ್ದಾರೆ. ತಮಿಳುನಾಡು ರಾಜ್ಯದ ವೆಲ್ಲೂರು ಜಿಲ್ಲೆಯ ಎಂ.ನಟರಾಜ್ ಅಲಿಯಾಸ್ ರಾಜರೆಡ್ಡಿ, ಅಲಿಯಾಸ್ ವಿಜಯ್, ಅಲಿಯಾಸ್ ಸೂರ್ಯ ರೆಡ್ಡಿ (50), ಕೃಷ್ಣಗಿರಿ ಜಿಲ್ಲೆಯ ಬಾಲಾಜಿ ಅಲಿಯಾಸ್ ಬಾಲಾ (41), ಬೆಂಗಳೂರಿನ ಬಾಣಸವಾಡಿಯ ರಾಕೇಶ್ (29), ಚೆನ್ನಸಂದ್ರದ ಜಿ.ವೆಂಕಟೇಶ್ (50) ಅವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 5.85 ಲಕ್ಷ […]