ಚೀನಾವನ್ನು ಮುಕ್ತಗೊಳಿಸಿ : ಅಮೆರಿಕಾದಲ್ಲಿ ಪ್ರತಿಭಟನೆ

ವಾಷಿಂಗಟನ್,ಡಿ.5- ಚೀನಾದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕಠಿಣ ಕ್ರಮಗಳನ್ನು ವಿರೋಧಿಸಿ ಚೀನಾದ ಪ್ರಜೆಗಳು ಅಮೆರಿಕಾದ ಶ್ವೇತ ಭವನದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಚೀನಾವನ್ನು ಮುಕ್ತಗೊಳಿಸಿ ಎಂಬ ಘೋಷಣೆಯೊಂದಿಗೆ ಕೈನಲ್ಲಿ ಕ್ಯಾಂಡಲ್ ಹಿಡಿದ 200 ಹೆಚ್ಚು ಮಂದಿ ಎರಡು ಬ್ಲಾಕ್‍ಗಳಲ್ಲಿ ಪ್ರತಿಭಟನೆ ನಡೆಸಿದರು. ಸರ್ವಾಕಾರ ಬೇಡ, ನಿರ್ಬಂಧಗಳು ಬೇಡ ಎಂಬ ಫಲಕಗಳನ್ನು ಪ್ರತಿಭಟನಾಕಾರರು ಹಿಡಿದಿದ್ದರು. ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಅಧಿಕಾರ ಬಿಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾಕಾರರು ಖಾಲಿ ಹಾಳೆಗಳನ್ನು ಪ್ರದರ್ಶನ ಮಾಡುವ ಮೂಲಕ ಕಮ್ಯೂನಿಸ್ಟ್ ಆಡಳಿತದ ನಿರ್ಬಂಧಗಳನ್ನು ವಿರೋಧಿಸಿದರು. […]