ಚೀನಾ-ಉತ್ತರ ಕೊರಿಯಾ ನಡುವೆ ಸರಕು ಸಾಗಾಣಿಕೆ ರೈಲೆ ಸೇವೆ ಪುನರಾರಂಭ
ಸಿಯೋಲ್, ಸೆ 26- ಐದು ತಿಂಗಳ ವಿರಾಮದ ನಂತರ ಉತ್ತರ ಕೊರಿಯಾ ಮತ್ತು ಚೀನಾ ಸರಕು ಸಾಗಣೆ ರೈಲು ಸೇವೆಯನ್ನು ಸೋಮವಾರ ಪುನರಾರಂಭಿಸಲಾಗಿದೆ ಎಂದು ದಕ್ಷಿಣ ಕೊರಿಯಾದ ಅಧಿಕಾರಿಗಳು ತಿಳಿಸಿದ್ದಾರೆ. ಸಾಂಕ್ರಾಮಿಕ ರೋಗ, ವಿಶ್ವಸಂಸ್ಥೆಯ ನಿರ್ಬಂಧಗಳು ಮತ್ತು ಇತರ ಅಂಶಗಳಿಂದ ಜರ್ಜರಿತವಾಗಿರುವ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಉತ್ತರ ಕೊರಿಯಾ ಹೆಣಗಾಡುತ್ತಿದೆ. ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಕಳೆದ ತಿಂಗಳು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಜಯಿಸುವುದಾಗಿ ನೀಡಿದ ಸಂಶಯಾಸ್ಪದ ಹೇಳಿಕೆ ಬಳಿಕ ಸರಕು ಸಾಗಾಣಿಕೆ ಪುನರ್ ಆರಂಭಗೊಂಡಿದೆ. […]