ಸುಮಲತಾ ಅಂಬರೀಷ್ ಬಿಜೆಪಿ ಸೇರ್ಪಡೆಗೆ ಮಹೂರ್ತ ಫಿಕ್ಸ್..?

ಬೆಂಗಳೂರು,ಮಾ.9- ಕಳೆದ ಹಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಸದಸ್ಯೆ ಸುಮಲತಾ ಅಂಬರೀಶ್ ಕೊನೆಗೂ ಬಿಜೆಪಿ ಸೇರಲು ವೇದಿಕೆ ಸಿದ್ದವಾಗಿದೆ.ಸುಮಲತಾ ಅಂಬರೀಶ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ವರಿಷ್ಠರು ಹಸಿರುನಿಶಾನೆ ತೋರಿದ್ದು, ಎಲ್ಲವೂ ನಿರೀಕ್ಷೆ ಯಂತೆ ನಡೆದರೆ ಶುಕ್ರವಾರವೇ ಬಿಜೆಪಿಗೆ ಸೇರ್ಪಡೆಯಾಗುವ ಸಾದ್ಯತೆ ಇದೆ. ಈ ಹಿನ್ನಲೆಯಲ್ಲಿ ಶುಕ್ರವಾರ ಮಂಡ್ಯದ ನಿವಾಸದಲ್ಲಿ ಸುಮಲತ ಅಂಬರೀಶ್ ಪತ್ರಿಕಾಗೋಷ್ಠಿ ಕರೆದಿದ್ದು ತಮ್ಮ ಮುಂದಿನ ರಾಜಕೀಯ ನಿಲುವುಗಳ ಬಗ್ಗೆ ಅವರು ಪ್ರಕಟಿಸಲಿದ್ದಾರೆ ಎಂದು ಹೇಳಲಾಗಿದೆ. […]

BIG NEWS : ಶುಕ್ರವಾರ ಸಂಪುಟ ವಿಸ್ತರಣೆ..?!

ಬೆಂಗಳೂರು,ಡಿ.14- ಎಲ್ಲವೂ ನಿರೀಕ್ಷೆಯಂತೆ ನಡೆದು ಹೈಕಮಾಂಡ್ ಒಪ್ಪಿಗೆ ಸೂಚಿಸಿದರೆ ಕಳೆದ ಒಂದು ವರ್ಷಗಳಿಂದ ಪದೇ ಪದೇ ಮುಂದೂಡಲ್ಪಟ್ಟಿದ್ದ ಹಾಗೂ ಬಹುಚರ್ಚಿತ ಸಚಿವ ಸಂಪುಟ ವಿಸ್ತರಣೆ ಶುಕ್ರವಾರ ನಡೆಯುವ ಸಾಧ್ಯತೆ ಇದೆ. ನವದೆಹಲಿಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಷಾ ಅವರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ಪಕ್ಷದ ಕಚೇರಿಗಳನ್ನು ಉದ್ಘಾಟಿಸಲು ಗುರುವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಕರ್ನಾಟಕಕ್ಕೆ ಆಗಮಿಸುತ್ತಿರುವುದರಿಂದ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ನೀಡುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು […]

ಇ-ಕಾಮರ್ಸ್ ದೈತ್ಯ ಅಮೆಜಾನ್‍ಗೆ ಸಂಕಷ್ಟ

ನವದೆಹಲಿ,ನ.25- ವಿಶ್ವದಲ್ಲಿ ಮುಂಚೂಣಿಯಲ್ಲಿರುವ ಆನ್‍ಲೈನ್ ಮಾರಾಟ ಸಂಸ್ಥೆಯಾದ ಅಮೆಜಾನ್ ಇಕ್ಕಟ್ಟಿಗೆ ಸಿಲುಕಿಕೊಂಡಿದೆ. ಸುಮಾರು 40 ದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಮೆಜಾನ್ ಸಿಬ್ಬಂದಿ ವರ್ಗದವರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ಹಾದಿ ಹಿಡಿದಿರುವ ಹಿನ್ನಲೆಯಲ್ಲಿ ಅಮೆಜಾನ್ ವ್ಯಾಪಾರ ವಹಿವಾಟುಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಭಾರತ, ಅಮೆರಿಕಾ, ಜಪಾನ್, ಆಸ್ಟ್ರೇಲಿಯಾ ಸೇರಿದಂತೆ ಸುಮಾರು 40 ದೇಶಗಳ ಅಮೆಜಾನ್ ವೇರ್‍ಹೌಸ್‍ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಸಿಬ್ಬಂದಿಗಳು ಮೇಕ್ ಅಮೆಜಾನ್ ಪೇ ಎಂಬ ಅಭಿಯಾನದ ಮೂಲಕ ವೇತನ ಹೆಚ್ಚಳ ಸೇರಿದಂತೆ ಹಲವಾರು […]

ಬೆಂಗಳೂರಲ್ಲಿ ಜಿಟಿಜಿಟಿ ಮಳೆ, ಶೀತಗಾಳಿ

ಬೆಂಗಳೂರು, ನ.11- ಉದ್ಯಾನ ನಗರಿ ಬೆಂಗಳೂರಿನಲ್ಲಿ ಶುಕ್ರವಾರ ದಿನವಿಡೀ ಸೂರ್ಯನ ದರ್ಶನವಾಗದೆ, ಮಬ್ಬು ಆವರಿಸಿಕೊಂಡಿತ್ತು.ಇದರ ನಡುವೆ ಅಲಲ್ಲಿ ಜಿಟಿ ಜಿಟಿ ಮಳೆಯೂ ಬಿತ್ತು. ಬೆಳಗಿನ ಜಾವ ಚುಮು ಚುಮು ಚಳಿಯ ಅನುಭವ ವಾದರೆ, ಮಧ್ಯಾಹ್ನ ಸ್ವಲ್ಪ ತಗ್ಗಿದರೂ ಬಿಸಿಲು ಬೀಳಲಿಲ್ಲ. ಶೀತಗಾಳಿ ಬೀಸುತ್ತಿತ್ತು. ಚಳಿಯಿಂದ ರಕ್ಷಿಸಿಕೊಳ್ಳಲು ಜನರು ಜಾಕೇಟ್, ಸ್ವೇಟರ್ ಮೊರೆ ಹೋಗಿರುವುದು ಕಂಡುಬಂತು. ತಂಪು ಆವರಿಸಿದ್ದರಿಂದ ವಯೋವೃದ್ಧರು, ಅನಾರೋಗ್ಯ ದಿಂದ ಬಳಲುವವರು ಮತ್ತಷ್ಟು ಸಂಕಷ್ಟ ಅನುಭವಿಸುವಂತಾಯಿತು. ಮಳೆ ಸುರಿಯುವ ರೀತಿಯಲ್ಲೇ ಬೆಳಿಗ್ಗೆಯಿಂದ ಮೋಡಕವಿದ ವಾತಾವರಣ ಮುಂದುವರಿದಿತ್ತು. […]