ಸರ್ಕಾರಿ ಇಂಧನ ಸಂಗ್ರಹಣ ಡಿಪೋದಲ್ಲಿ ಅಗ್ನಿ ಅವಘಡ, 16 ಮಂದಿ ಸಾವು

ಜಕಾರ್ತಾ, ಮಾ.4- ಸರ್ಕಾರಿ ಇಂಧನ ಸಂಗ್ರಹಣ ಡಿಪೋದಲ್ಲಿ ಬೆಂಕಿ ಅವಘಡ ಸಂಭವಿಸಿ ಇಬ್ಬರು ಮಕ್ಕಳು ಸೇರಿದಂತೆ 16 ಜನ ಸಾವನ್ನಪ್ಪಿ 50ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಇಂಡೋನೇಷ್ಯಾ ರಾಜಧಾನಿ ಉತ್ತರ ಜಕಾರ್ತಾದಲ್ಲಿ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಹಲವು ಮನೆಗಳು ಸುಟ್ಟು ಕರಕಲಾಗಿವೆ. ನಿನ್ನೆ ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಕಾರ್ತಾ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ತಿಳಿಸಿದೆ. ಸದ್ಯ ಇಂಧನ ಸಂಗ್ರಹಣಾ ಡಿಪೋ ಸುತ್ತಮುತ್ತ ಇರುವ […]

ಇಂಧನ ಪೂರೈಕೆಯಲ್ಲಿ ಗೋಲ್‍ಮಾಲ್, 8 ಜನರ ವಿರುದ್ಧ ಕೇಸ್

ಥಾಣೆ. ಅ, 17- ಇಂಧನ ಪೂರೈಕೆ ವೇಳೆ ತಪ್ಪು ದಾಖಲೆಗಳನ್ನು ನಿರ್ಮಿಸಿ 6.83 ಲಕ್ಷ ರೂಪಾಯಿ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ನವಿ ಮುಂಬೈ ಪೊಲೀಸರು ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇಂಧನ ಪೂರೈಸಿದ ಪೆಟ್ರೋಲ್ ಬಂಕ್ ಮಾಲೀಕರು, ಉದ್ಯೋಗಿಗಳು ಮತ್ತು ಪೊಲೀಸ್ ಚಾಲಕ ಕೂಡ ಸೇರಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇಂಧನ ಪೂರೈಕೆ ಮಾಡಿದ ನಂತರ ನೀಡುವ ಬಿಲ್ ಮೊತ್ತವನ್ನು ದುರುಪಯೋಗಪಡಿಸಿಕೊಳ್ಳಲು ಆರೋಪಿಗಳು ಸಂಚು ಮಾಡಿದ್ದರು, ಈ ದಂಧೆಯು ದೀರ್ಘಕಾಲದಿಂದ ನಡೆಯುತ್ತಿದೆ ಎಂದು […]

ಕರೆಂಟ್ ಶಾಕ್ : ಹಬ್ಬದ ಸಂಭ್ರಮದಲ್ಲಿದ್ದ ಜನರ ಹೊಟ್ಟೆ ಉರಿಸಿದ ಸರ್ಕಾರ

ಬೆಂಗಳೂರು,ಅ.1- ನವರಾತ್ರಿ ಹಬ್ಬ ಹೊಸ್ತಿಲಲ್ಲಿರುವ ರಾಜ್ಯದ ಜನತೆಗೆ ಸರ್ಕಾರ ವಿದ್ಯುತ್ ದರ ಏರಿಕೆಯ ಶಾಕ್ ಕೊಟ್ಟಿದೆ.ವಿದ್ಯುತ್ ಪೂರೈಕೆ ಮಾಡುವ ಕಂಪನಿಗಳ ಕೋರಿಕೆಯಂತೆ ಇಂದಿನಿಂದಲೇ ಜಾರಿಯಾ ಗುವಂತೆ ಪ್ರತಿ ಯೂನಿಟ್‍ಗೆ23ರಿಂದ 43 ಪೈಸೆ ಬೆಲೆ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುತ್ ನಿಯಂ ತ್ರಣ ಆಯೋಗ ಆದೇಶ ಹೊರಡಿಸಿದೆ. ನೂತನ ದರವು ಇಂದಿನಿಂದಲೇ ಜಾರಿಯಾಗಲಿದ್ದು, ಪ್ರತಿ ಯೂನಿಟ್‍ಗೆ ಬೆಸ್ಕಾಂ ವ್ಯಾಪ್ತಿಲ್ಲಿ 24 ಪೈಸೆ, ಸೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೆ 32 ಪೈಸೆ ಹಾಗೂ ಹೆಸ್ಕಾಂ, ಜೆಸ್ಕಾಂ ವ್ಯಾಪ್ತಿಯಲ್ಲಿ 35 ಪೈಸೆ ವಿದ್ಯುತ್ […]

ಬಾಂಗ್ಲಾದಲ್ಲಿ ತೈಲ ಬೆಲೆ ಏರಿಕೆ ವಿರುದ್ಧ ರೊಚ್ಚಿಗೆದ್ದ ಜನರಿಂದ ಭಾರಿ ಪ್ರತಿಭಟನೆ

ಡಾಕ, ಆ. 8- ಪೆಟ್ರೊಲ್, ಡಿಸೇಲ್, ಗ್ಯಾಸ್ ಅನಿಲ ಬೆಲೆಯನ್ನು ಶೇ. 50ರಷ್ಟು ಹೆಚ್ಚಳ ಮಾಡಿರುವುದನ್ನು ಖಂಡಿಸಿ ಬಾಂಗ್ಲಾದೇಶದಾದ್ಯಂತ ರೊಚ್ಚಿಗೆದ್ದು ಜನರು ಪ್ರತಿಭಟನೆಗಿಳಿದಿದ್ದಾರೆ. ಪೆಟ್ರೊಲ್ ಪ್ರತಿ ಲೀಟರ್‍ಗೆ 100 ಟಾಕ ಇದ್ದ ಬೆಲೆ ಏಕಾಏಕಿ 130(108) ರ ಸಮೀಪ ಬಂದಿರುವುದು ಜನರನ್ನು ಆತಂಕಕ್ಕೆ ದೂಡಿದ್ದು, ಪ್ರತಿಭಟನಾಕಾರರು ಪೆಟ್ರೊಲ್ ಬಂಕ್‍ಗಳ ಮುಂದೆ ಜಮಾಯಿಸಿ ಹಿಂಸಾ ಕೃತ್ಯದಲ್ಲಿ ತೊಡಗಿದ್ದಾರೆ. ಹಲವೆಡೆ ಲಾಠಿ ಚಾರ್ಜ್, ಗೋಲಿಬಾರ್‍ಗಳು ನಡೆದಿದ್ದು, ಹಲವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರತಿಭಟನಾಕಾರರು ಪ್ರಧಾನಿ ಶೇಕ್ ಹಸೀನ ವಿರುದ್ಧ ಘೋಷಣೆಗಳನ್ನು […]