ಮೋಜಿನ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದವನ ಬಂಧನ

ಬೆಂಗಳೂರು, ನ.22- ಶೋಕಿ, ಮೋಜು- ಮಸ್ತಿ ಜೀವನಕ್ಕಾಗಿ ಕಳ್ಳತನದ ಹಾದಿ ಹಿಡಿದಿದ್ದ ನಟೋರಿಯಸ್ ವಾಹನ ಕಳ್ಳನೊಬ್ಬನನ್ನು ಕೆಆರ್ ಪುರ ಠಾಣೆ ಪೊಲೀಸರು ಬಂಧಿಸಿ 12 ಲಕ್ಷ ರೂ. ಬೆಲೆಬಾಳುವ 8 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ಕೋಲಾರದ ಕೆಜಿಎಫ್‍ನ ಭಾರತಿಪುರಂ ನಿವಾಸಿ ಸೈಯ್ಯದ್ ಸಲ್ಮಾನ್(25) ಬಂಧಿತ ಆರೋಪಿ. ಈತನಿಂದ 7 ಬೈಕ್‍ಗಳು ಮತ್ತು ಒಂದು ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ವಾಹನಗಳ ಹ್ಯಾಂಡ್ ಲಾಕ್‍ಗಳನ್ನು ಮುರಿದು, ಇಗ್ನೀಷಿಯನ್ ವೈರನ್ನು ಕತ್ತರಿಸಿ ವಾಹನಗಳನ್ನು ಡೈರೆಕ್ಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದನು. ಆರೋಪಿಯು ಸುಲಭವಾಗಿ […]