ಸ್ಯಾಂಟೋಸ್ ಕ್ರೀಡಾಂಗಣದಲ್ಲಿ ಪೀಲೆ ಅಂತ್ಯಸಂಸ್ಕಾರ

ಬ್ರೇಜಿಲ್,ಜ.3- ಫುಟ್‍ಬಾಲ್ ದಂತಕಥೆ ಪೀಲೆ ಅವರ ಅಂತ್ಯಸಂಸ್ಕಾರ ಇಂದು ನೆರವೇರಿತು. ಸ್ಯಾಂಟೋಸ್ ಹಾಗೂ ಬ್ರೇಜಿಲ್ ರಾಷ್ಟ್ರ ಧ್ವಜಗಳನ್ನು ಹೊದಿಸಲಾಗಿದ್ದ ಶವ ಪೆಟ್ಟಿಗೆಯನ್ನು ಬಿಳಿ ಹೂವುಗಳಿಂದ ಮುಚ್ಚಿ ಸಕಲ ಸರ್ಕಾರಿ ಗೌರವದೊಂದಿಗೆ ಪೀಲೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಬ್ರೇಜಿಲ್ ಫುಟ್ಬಾಲ್ ಆಟಗಾರ ನೇಮರ್ ಸೇರಿದಂತೆ ಹಲವಾರು ತಾರಾ ಆಟಗಾರರು ಈ ಸಂದರ್ಭದಲ್ಲಿ ಹಾಜರಿದ್ದು ಅಗಲಿದ ಮಹಾನ್ ಆಟಗಾರನಿಗೆ ಅಂತಿಮ ನಮನ ಸಲ್ಲಿಸಿದರು. ಸ್ಯಾಂಟೋಸ್ ಕ್ರೀಡಾಂಗಣದಿಂದಲೇ ಫುಟ್ಬಾಲ್ ತಾರೆಯಾಗಿ ಹೊರಹೊಮ್ಮಿದ್ದ ಪೀಲೆ ಅವರನ್ನು ಅದೇ ಕ್ರೀಡಾಂಗಣದಲ್ಲೇ ಚಿರಸ್ಥಾಯಿಯಾಗಿದ್ದು, ದೇಶ ವಿದೇಶಗಳ ಸಾವಿರಾರು […]