ಜಿ-20 ಶೃಂಗ : ಪ್ರಧಾನಿ ಮೋದಿಗೆ ಸಲಹೆ ಕೊಟ್ಟ ದೇವೇಗೌಡರು

ಬೆಂಗಳೂರು,ಡಿ.6-ಭೌಗೋಳಿಕ ಸಂಘರ್ಷಮಯ ವಾತಾವರಣದ ನಡುವೆಯೂ ಆಹಾರ, ರಸಗೊಬ್ಬರ, ವೈದ್ಯಕೀಯ ಉತ್ಪನ್ನಗಳ ಸರಬರಾಜನ್ನು ರಾಜಕೀಯ ಮುಕ್ತಗೊಳಿಸಲು ಪ್ರಯತ್ನಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ಮಾಡಿದ್ದಾರೆ. ಭಾರತವು ಜಿ-20 ಶೃಂಗ ರಾಷ್ಟ್ರಗಳ ಕೂಟದ ಅಧ್ಯಕ್ಷತೆ ವಹಿಸಿಕೊಂಡ ಸಂದರ್ಭದಲ್ಲಿ ಅನುಸರಿಸಬೇಕಾದ ಕಾರ್ಯಚಟುವಟಿಕೆಗಳ ಕುರಿತು ಸಮಾಲೋಚನೆ ನಡೆಸಲು ನಿನ್ನೆ ಕರೆಯಲಾಗಿದ್ದ ಸರ್ವಪಕ್ಷಗಳ ಸಭೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿರುವ ದೇವೇಗೌಡರು ಪಾಲ್ಗೊಂಡಿದ್ದು, ಕೆಲವು ಸಲಹೆಗಳನ್ನು ನೀಡಿದ್ದಾರೆ. ಆ ಸಲಹೆಗಳ ಅಂಶಗಳನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ. ಜಿ-20 ಶೃಂಗದ ಅಧ್ಯಕ್ಷತೆ […]