ಹುಲಿ ಎಂದೂ ಹುಲ್ಲು ತಿನ್ನಲ್ಲ : ಸ್ವಪಕ್ಷೀಯರ ವಿರುದ್ಧವೇ ರೆಡ್ಡಿ ಕೆಂಡಾಮಂಡಲ

ಬಳ್ಳಾರಿ,ನ.5- ಹುಲಿ ಬೇಟೆಗೆ ನಿಂತರೆ, ಬೇಟೆಯಾಡಿಯೇ ತೀರುತ್ತದೆ. ನಾನು ಬೇಟೆಗಿಳಿದೇ ತೀರುತ್ತೇನೆ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಮತ್ತೆ ಸ್ವಪಕ್ಷೀಯರ ವಿರುದ್ಧವೇ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಕಾನೂನಿನ ಹೋರಾಟದಲ್ಲಿ ತಾತ್ಕಲಿಕವಾಗಿ ಹಿನ್ನಡೆಯಾಗಿರಬಹುದು. ಹಾಗಂತ ನಾನು ಕೈಕಟ್ಟಿ ಕೂತಿಲ್ಲ. ಹುಲಿ ಬೇಟೆಗೆ ಇಳಿದಾಗ ಎಂದೂ ಕೂಡ ಹುಲ್ಲು ತಿನ್ನುವುದಿಲ್ಲ. ತಿನ್ನುವುದು ಮಾಂಸವೇ ಎಂದು ಪರೋಕ್ಷವಾಗಿ ತಮ್ಮ ರಾಜಕೀಯ ಎದುರಾಳಿಗಳ ವಿರುದ್ಧವೂ ಗುಡುಗಿದರು.ಒಬ್ಬ ಹುಡುಗ ನನ್ನನ್ನು ನೋಡಿ ಹುಲಿ ಬಂತು ಎಂದು ಕೂಗಿದ. ಸುಮ್ಮನೆ […]