ಗಾಂಧಿ ಕುಟುಂಬ ಪ್ರಭಾವದೆದುರು ಈಜುವುದೇ ಖರ್ಗೆ ಮುಂದಿರುವ ಬೃಹತ್ ಸವಾಲು

#ಉಮೇಶ್ ಕೋಲಿಗೆರೆಎಐಸಿಸಿ ಅಧ್ಯಕ್ಷರಾಗಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭೂತಪೂರ್ವ ಗೆಲುವು ಸಾಧಿಸುತ್ತಿದ್ದಂತೆ ಹಲವು ರಾಜಕೀಯ ಲೆಕ್ಕಚಾರಗಳು ಶುರುವಾಗಿವೆ. ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆಗಳಾಗಲಿವೆಯೇ ಅಥವಾ ಯಥಾಸ್ಥಿತಿ ಮುಂದುವರೆಯಲಿದೆಯೇ ಎಂಬ ಪ್ರಶ್ನೆಗಳು ಕಾಡಲಾರಂಭಿಸಿವೆ. ಎಐಸಿಸಿಗೆ ಖರ್ಗೆ ಆಯ್ಕೆಯಿಂದ ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ರೇಸ್‍ನಲ್ಲಿ ಮತ್ತೊಬ್ಬ ಪ್ರತಿಸ್ರ್ಪಧಿ ಬದಿಗೆ ಸರಿದಂತಾಗಿದ್ದು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಡಿ.ಕೆ.ಶಿವಕುಮಾರ್ ಅವರ ಹಾದಿ ಸುಗಮಗೊಂಡಂತಾಗಿದೆ. ನಕಲಿ ಶಿಕ್ಷಕರ ನೇಮಕಾತಿ CID ಪೊಲೀಸರ ದಾಳಿ: ಕೆಲವರು ವಶಕ್ಕೆ 2009ರಲ್ಲಿ ರಾಷ್ಟ್ರ […]

ನಕಲಿ ಗಾಂಧಿ ಪರಿವಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ದುರಂತ : ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ,ಅ.2- ನಕಲಿ ಗಾಂಧಿ ಪರಿವಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ದುರಂತ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು. ಗಾಂೀಧಿಜಿ ಜಯಂತಿ ಅಂಗವಾಗಿ ಕಿಮ್ಸ್ ಆವರಣ ಮುಂಭಾಗದಲ್ಲಿ ಗಾಂೀಧಿಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವ ಪ್ರಶ್ನೆ ಇಲ್ಲ. ಅವರು ಭಾರತ ಜೋಡೋ ಯಾತ್ರೆ ಮುಗಿದ ತಕ್ಷಣ ವಿಶ್ರಾಂತಿಗೆ ವಿದೇಶಕ್ಕೆ ಹೋಗುತ್ತಾರೆ. ಈಗಾಗಲೇ ಈ ಹಿಂದಿನ ಚುನಾವಣೆಯಲ್ಲಿ ಜನರು ಯಾರು ಯಾರ […]

ಧೂಳು ಹಿಡಿದಿದ್ದ ಗಾಂಧಿ ಪ್ರತಿಮೆ ಶುಚಿಗೊಳಿಸಿದ ಬಿಹಾರ ಡಿಸಿಎಂ

ನವದೆಹಲಿ,ಅ.2- ಲಂಡನ್‍ನಲ್ಲಿ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಧೂಳು ಹಿಡಿದಿದ್ದ ಗಾಂಧಿ ಪ್ರತಿಮೆಯನ್ನು ತಮ್ಮ ಕರವಸ್ತ್ರದಿಂದ ಶುಚಿಗೊಳಿಸಿರುವ ವಿಡಿಯೋ ಇದೀಗ ಎಲ್ಲೇಡೆ ವೈರಲ್ ಆಗಿದೆ. ಕಳೆದ ತಿಂಗಳು ಲಂಡನ್‍ನಲ್ಲಿರುವ ಬ್ರಿಟಿಷ್ ಸಂಸತ್ತಿಗೆ ಭೇಟಿ ನೀಡಿದ್ದ ತೇಜಸ್ವಿ ಅವರು ಗಾಂಧಿ ಪ್ರತಿಮೆ ಮೇಲೆ ಇದ್ದ ಧೂಳನ್ನು ತಮ್ಮ ಕರವಸ್ತ್ರದಿಂದ ಶುಚಿಗೊಳಿಸುತ್ತಿರುವ ವಿಡಿಯೋ ತುಣಕನ್ನು ಆರ್‍ಜೆಡಿ ಶಾಸಕರೊಬ್ಬರು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ. ರಾಷ್ಟ್ರಪಿತನ ಐತಿಹಾಸಿಕ ಕಂಚಿನ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಹೋದಾಗ . ಅದರ ಮೇಲಿದ್ದ ಧೂಳನ್ನು ಕಂಡ ತೇಜಸ್ವಿ […]

ಗಾಂಧಿ ಪ್ರತಿಮೆ ಎದುರು ಸಂಸದರ ಅಹೋರಾತ್ರಿ ಧರಣಿ ಮುಂದುವರಿಕೆ

ನವದೆಹಲಿ, ಜು.28- ಅಗತ್ಯ ವಸ್ತುಗಳ ಬೆಲೆ ಏರಿಕೆ, ದಿನ ಬಳಕೆಯ ವಸ್ತುಗಳ ಮೇಲೆ ಜಿಎಸ್‍ಟಿ ಹೇರಿಕೆ ಕುರಿತಂತೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಉಭಯ ಸದನಗಳಲ್ಲಿ ಗದ್ದಲ ಮಾಡಿ ಅಮಾನತುಗೊಂಡಿರುವವರ, ಸಂಸದರು ಸಂಸತ್‍ನ ಮಹಾತ್ಮ ಗಾಂಧಿ ಪ್ರತಿಮೆ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಹೋರಾಟ ಇಂದು ಕೂಡ ಮುಂದುವರೆದಿದೆ. ಬುಧುವಾರ ಬೆಳಗ್ಗೆ 11 ಗಂಟೆಯಿಂದ ಆರಂಭಿಸಿರುವ ಅಹೋರಾತ್ರಿ ಧರಣಿ ಹೋರಾಟ ನಾಳೆ ಮಧ್ಯ ರಾತ್ರಿ ಒಂದು ಗಂಟೆಯವರೆಗೂ ಸುಮಾರು 50 ಗಂಟೆಗಳ ಕಾಲ ಮುಂದುವರೆಯಲಿದೆ. ಧರಣಿ ಸತ್ಯಾಗ್ರಹದಲ್ಲಿ […]