ಗಾಂಧೀಜಿ ಕೊಂದಿದ್ದು ನಾವೇ ಎಂದು ಒಪ್ಪಿಕೊಂಡ ಬಿಜೆಪಿ ನಾಯಕ : ಕಾಂಗ್ರೆಸ್ ಹಿಗ್ಗಾಮುಗ್ಗಾ ವಾಗ್ದಾಳಿ

ಬೆಂಗಳೂರು, ಆ.10- ಗಾಂಧೀಜಿ ಕೊಂದಿದ್ದು ನಾವೇ ಎಂದು ಸ್ವಲ್ಪವೂ ಹಿಂಜರಿಕೆ ಇಲ್ಲದೆ ಸಂಘ ಪರಿವಾರ ಹೆಮ್ಮೆಯಿಂದ ಹೇಳಿಕೊಂಡಿದೆ. ಈ ಮೂಲಕ ಸಂಘದ ಕೂಸು ಬಿಜೆಪಿಯ ದೇಶ ದ್ರೋಹದ ಅಸಲಿ ಮುಖವಾಡ ಬಯಲಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ. ನೇರ ಪ್ರಸಾರದ ಚರ್ಚೆಯೊಂದರಲ್ಲಿ ಕಾಂಗ್ರೆಸ್ ನಾಯಕ ಸತ್ಯ ಪ್ರಕಾಶ್ ಮತ್ತು ಹಿಂದು ಮಹಾಸಭಾದ ನಾಯಕ ಎನ್ನಲಾದ ನಾರಾಯಣಸುಬ್ರಮಣ್ಯರಾಜು ಅವರ ನಡುವೆ ಚರ್ಚೆ ನಡೆದಿದ್ದು, ಅಲ್ಲಿ ನಾರಾಯಣ ರಾಜು ಅವರು ಮಹಾತ್ಮ ಗಾಂಧಿಯನ್ನು ಕೊಂದಿದ್ದು ನಾವೇ ಎಂದು ಸಮರ್ಥಿಸಿಕೊಂಡಿದ್ದಾರೆ. ಗೋಡ್ಸೆ ನಮ್ಮ […]