ಬೆಂಗಳೂರಲ್ಲಿ ಒಂದೇ ದಿನ 1.59 ಲಕ್ಷ ಗಣೇಶಮೂರ್ತಿಗಳ ವಿಸರ್ಜನೆ

ಬೆಂಗಳೂರು,ಸೆ.1-ಗಣೇಶ ಚತುರ್ಥಿಯ ದಿನವಾದ ನಿನ್ನೆ ಒಂದೇ ದಿನ ನಗರದಲ್ಲಿ 1,59 ಲಕ್ಷ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ನಗರದಲ್ಲಿ ಸ್ಥಾಪಿಸಿರುವ ಮೊಬೈಲ್ ಟ್ಯಾಂಕರ್ಗಳು ಹಾಗೂ ಕಲ್ಯಾಣಿ ಮತ್ತು ಹೊಂಡಗಳಲ್ಲಿ ಒಟ್ಟು 1,59,980 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿರುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಸರ್ಜನೆ ಮಾಡಿರುವ ಮಣ್ಣಿನ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್(ಪಿಓಪಿ) ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿರುವ ವಿವರ ಈ ಕೆಳಕಂಡತಿದೆ. ಪಶ್ಚಿಮ ವಲಯದಲ್ಲಿ 34,471ಮಣ್ಣಿನ ಗಣೇಶ ಮೂರ್ತಿಗಳು ಹಾಗೂ 306 ಪಿಓಪಿ ಗಣೇಶ ಮೂರ್ತಿಗಳು, ದಕ್ಷಿಣ ವಲಯದಲ್ಲಿ […]