ಗಣೇಶ ಮೂರ್ತಿಗಳ ವಿಸರ್ಜನೆಗೆ ಸಿದ್ದಗೊಂಡಿವೆ 458 ಸ್ಥಳಗಳು

ಬೆಂಗಳೂರು,ಆ.29- ಗಣೇಶಮೂರ್ತಿಗಳ ವಿಸರ್ಜನೆಗೆ ಪಾಲಿಕೆ ಸಕಲ ಸಿದ್ದತೆ ಪೂರ್ಣಗೊಳಿಸಿದೆ. ನಗರದಾದ್ಯಂತ ಗಣೇಶ ವಿಸರ್ಜನೆಗೆ 458 ಸ್ಥಳಗಳು ಸಿದ್ಧಗೊಳಿಸಲಾಗಿದೆ. ಸಾರ್ವಜನಿಕರ ಗಣೇಶಮೂರ್ತಿಗಳ ವಿಸರ್ಜನೆಗೆ ನಗರದಲ್ಲಿ 421 ಸಂಚಾರಿ ಟ್ಯಾಂಕರ್‍ಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ ದೊಡ್ಡ ಗಣೇಶ ವಿಗ್ರಹಗಳ ವಿಸರ್ಜನೆಗೆ 37 ಕಲ್ಯಾಣಿಗಳನ್ನು ಅಣಿಗೊಳಿಸಲಾಗಿದೆ. ಮನೆ, ಕಚೇರಿ ಹಾಗೂ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿ ವಿಸರ್ಜನೆಗೆ ಒಟ್ಟಾರೆ 458 ಸ್ಥಳಗಳ ವ್ಯವಸ್ಥೆ ಕಲ್ಪಿಸಲಾಗಿದೆ.ಸಾರ್ವಜನಿಕರು ತಮ್ಮ ಮನೆಗಳ ಬಳಿಯೇ ಗಣೇಶ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಪಾಲಿಕೆಯ 8 ವಲಯಗಳ 27 ವಿಧಾನಸಭಾ […]

ಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರಿಂದ ಊರುಗಳಿಗೆ ತೆರಳುವವರಿಗೆ ಗುಡ್ ನ್ಯೂಸ್

ಬೆಂಗಳೂರು,ಆ.26- ಗೌರಿ ಗಣೇಶ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‍ಆರ್‍ಟಿಸಿ)ವು ಆ.29 ಮತ್ತು 30ರಂದು ವಿವಿಧ ಸ್ಥಳಗಳಿಗೆ 500 ವಿಶೇಷ ಬಸ್‍ಗಳನ್ನು ಹೆಚ್ಚುವರಿಯಾಗಿ ನಿಯೋಜಿಸಿರುವುದಲ್ಲದೆ ಪ್ರಯಾಣಿಕರಿಗೆ ವಿವಿಧ ಆಫರ್‍ಗಳನ್ನು ನೀಡಿದೆ. ಈ ಹೆಚ್ಚುವರಿ ಬಸ್‍ಗಳು ಈ ಎರಡು ದಿನ ಬೆಂಗಳೂರಿನಿಂದ ರಾಜ್ಯದ ವಿವಿಧೆಡೆ ಸಂಚರಿಸಲಿವೆ. ಇದರ ಜತೆಗೆ ಕರ್ನಾಟಕದಿಂದ ಹೊರ ರಾಜ್ಯಗಳಿಗೆ ನಿಗಮದಿಂದ ಹೆಚ್ಚುವರಿ ಬಸ್ ಸಂಚರಿಲಿವೆ ಎಂದು ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ. ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಶೇಷ […]

ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಚಿಂತನೆ : ಸಚಿವ ಅಶೋಕ್

ಬೆಂಗಳೂರು,ಆ.25- ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವ ಕುರಿತು ಗಂಭೀರ ಚಿಂತನೆ ಮಾಡಬೇಕಿದೆ. ಅಧಿಕಾರಿಗಳಿಂದ ಮಾಹಿತಿ ಪಡೆದು, ಯಾವ ಸಂದರ್ಭದಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕೆಂದು ಸೂಕ್ತ ನಿರ್ಧಾರ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆ ಬಹಳ ಪ್ರಮುಖ ಆಗಿದೆ. ಗಣೇಶ ಕೂರಿಸುವ ಸಂಬಂಧ ಇಂದು ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಸಭೆ ಮಾಡುತ್ತಿದ್ದಾರೆ. ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಸಂಬಂಧ ನನಗೆ ಯಾವುದೇ ಮನವಿಗಳು ಬಂದಿಲ್ಲ. ಕಾನೂನು ಸುವ್ಯವಸ್ಥೆ ಮುಖ್ಯವಾಗಿದ್ದು, ಜಿಲ್ಲಾಧಿಕಾರಿಗಳಿಗೆ ಕೊಟ್ಟಿದ್ರೆ ಅವರು ಸೂಕ್ತ […]

ಚಾಮರಾಜಪೇಟೆ ಮೈದಾನದ ಗಣೇಶೋತ್ಸವಕ್ಕೆ ಚಂದಾ ವಸೂಲಿ

ಬೆಂಗಳೂರು,ಆ.22-ಚಾಮರಾಜಪೇಟೆ ಮೈದಾನ ಗಣೇಶೋತ್ಸವ ಆಚರಣೆಗೂ ಮುನ್ನವೇ ಕೆಲವರು ಚಂದಾ ವಸೂಲಿಗೆ ಮುಂದಾಗುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಚಾಮರಾಜಪೇಟೆ ನಾಗರಿಕ ಒಕ್ಕೂಟ ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವಂತೆ ಸರ್ಕಾರದ ಅನುಮತಿ ಕೋರಿದೆ. ಸರ್ಕಾರ ಇನ್ನು ಗಣೇಶೋತ್ಸವ ಆಚರಣೆಗೆ ಗ್ರೀನ್ ಸಿಗ್ನಲ್ ನೀಡಿಲ್ಲ. ಇದರ ಮಧ್ಯೆ ಕೆಲವರು ಚಂದಾ ವಸೂಲಿಗೆ ಇಳಿದಿದ್ದಾರೆ.ಚಾಮರಾಜಪೇಟೆ ನಾಗರಿಕ ಒಕ್ಕೂಟದ ಹೆಸರಿನಲ್ಲಿ ಚಂದಾ ವಸೂಲಿ ಮಾಡುತ್ತಿರುವುದು ಗಮನಾರ್ಹವಾಗಿದ್ದು, ಕೆಲವರು ಬಿಲ್ ಬುಕ್ ಪ್ರಿಂಟ್ ಹಾಕಿಸಿ ಸಿಕ್ಕ ಸಿಕ್ಕ ಕಡೆಗಳಲ್ಲಿ ಚಂದಾ ವಸೂಲಿಗಿಳಿದಿದ್ದಾರೆ. ನಾವು […]

ಗಣೇಶನ ಜೊತೆ ಸಾರ್ವಕರ್ ಫೋಟೋ ಇಟ್ಟು ಹಬ್ಬ ಆಚರಣೆಗೆ ಮುಂದಾದ ಸಂಘಟನೆಗಳು

ಬೆಂಗಳೂರು,ಆ.20- ಈಗಾಗಲೇ ಒಂದಿಲ್ಲೊಂದು ವಿವಾದಗಳು ಭುಗಿಲೆದ್ದಿರುವ ಸಂದರ್ಭದಲ್ಲೇ ಈ ಬಾರಿಯ ಗಣೇಶೋತ್ಸವವು ಸಂಘರ್ಷಕ್ಕೆ ಎಡೆ ಮಾಡಿಕೊಡುವ ಸಂಭವವಿದೆ. ಏಕೆಂದರೆ ಹಿಂದೂಪರ ಸಂಘಟನೆಗಳು ಗಣೇಶೋತ್ಸವ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾರ್ವಕರ್ ಭಾವಚಿತ್ರವನ್ನು ಹಳ್ಳಿ ಹಳ್ಳಿಗಳಲ್ಲಿ ಇಡಲು ಮುಂದಾಗಿವೆ. ಹೀಗಾಗಿ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಗಣೇಶ ಸಂಘರ್ಷ ಭುಗಿಲೇಳುವ ಸಾಧ್ಯತೆಗಳಿವೆ. ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ವೀರ್ ಸಾರ್ವಕರ್ ಭಾವಚಿತ್ರ ಹಾಕಿದ್ದರಿಂದ ಅನ್ಯಕೋಮಿನ ಯುವಕರು ಪ್ರತಿಭಟನೆ ನಡೆಸಿ ದೊಡ್ಡ ರಾದ್ದಂತವನ್ನೇ ಸೃಷ್ಟಿಸಿದ್ದರು. ಗಲಭೆಯಲ್ಲಿ ಓರ್ವ ಯುವಕನಿಗೆ ಚಾಕು ಇರಿಲಾಗಿತ್ತು.ಈಗ […]

ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಸಿಎಂ ಜತೆ ಚರ್ಚೆ : ಅಶೋಕ್

ಬೆಂಗಳೂರು,ಆ.17- ಕಳೆದ 75 ವರ್ಷದಲ್ಲಿ ರಾಷ್ಟ್ರ ಧ್ವಜ ಹಾರಿಸಿರದ ಚಾಮರಾಜಪೇಟೆ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿದೆ ಅದರಂತೆ ಮುಂಬರುವ ಗಣೇಶ ಹಬ್ಬವನ್ನು ಕೂಡಾ ಈ ಮೈದಾನದಲ್ಲಿ ಆಚರಿಸಲು ಸಿಎಂ ಜೊತೆ ಮಾತುಕತೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜ ಪೇಟೆ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆ ಮಾಡುವ ಕುರಿತು ಜಿಲ್ಲಾಡಳಿತಕ್ಕೆ ಮನವಿ ಪತ್ರಗಳು ಬಂದಿದ್ದು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು ಅಲ್ಲದೆ ಈಗ ಆ […]

ಈದ್ಗಾ ವಿವಾದ : ಭುಗಿಲೆದ್ದ ಆಕ್ರೋಶ, ಜಮೀರ್ ವಿರುದ್ಧ ಹಿಂದೂ ಸಂಘಟನೆಗಳು ಕಿಡಿ

ಬೆಂಗಳೂರು, ಆ.9- ಚಾಮರಾಜಪೇಟೆ ಮೈದಾನದ ವಿವಾದ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮೈದಾನದಲ್ಲಿ ಗಣೇಶ ಹಬ್ಬ ಸೇರಿದಂತೆ ಯಾವುದೇ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಅವಕಾಶ ನೀಡಲಾಗದು ಎಂದು ಹೇಳಿಕೆ ನೀಡಿರುವ ಶಾಸಕ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಹಿಂದೂಪರ ಸಂಘಟನೆಗಳು ಮುಗಿಬಿದ್ದಿವೆ. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವದಂತಹ ರಾಷ್ಟ್ರೀಯ ಮತ್ತು ರಾಜ್ಯ ಹಬ್ಬಗಳನ್ನು ಚಾಮರಾಜಪೇಟೆ ಮೈದಾನದಲ್ಲಿ ಅದ್ಧೂರಿಯಾಗಿ ಆಚರಿಸಲು ಅವಕಾಶವಿದೆ. ಆದರೆ, ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಅವಕಾಶ ನೀಡಲಾಗದು. ಇದಕ್ಕೆ ನಮ್ಮ ಸಮ್ಮತಿಯೂ ಇಲ್ಲ ಎಂದು ಶಾಸಕರು […]