ಹಿಂದೂಗಳ ಅಂಗಡಿಯಲ್ಲೇ ಗಣಪತಿ ಶೃಂಗಾರದ ವಸ್ತುಗಳನ್ನು ಖರೀದಿಸುವಂತೆ ಅಭಿಯಾನ

ಬೆಂಗಳೂರು, ಆ.6- ಹಿಜಾಬ್, ಹಲಾಲ್ ನಂತರ ಈಗ ಮತ್ತೊಂದು ಧರ್ಮ ಹೋರಾಟ ಶುರುವಾಗಿದೆ. ಬರುವ ಗಣೇಶ ಹಬ್ಬದ ಸಂದರ್ಭದಲ್ಲಿ ಯಾರೂ ಕೂಡ ಅನ್ಯಧರ್ಮೀಯರು ತಯಾರಿಸಿದ ಮೂರ್ತಿಗಳನ್ನು ಖರೀದಿಸಬಾರದು ಎಂಬ ಅಭಿಯಾನ ಶುರುವಾಗಿದೆ. ವಿಘ್ನನಿವಾರಕನ ಚೌತಿ ಸಂದರ್ಭದಲ್ಲಿ ಹೊಸ ಸಮಸ್ಯೆಗಳು ಎದುರಾಗುತ್ತಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ ಮತ್ತೊಂದು ತಲೆ ನೋವು ಶುರುವಾಗಿದೆ. ಶ್ರೀರಾಮ ಸೇನೆ ವತಿಯಿಂದ ಮುಸಲ್ಮಾರ ಅಂಗಡಿಗಳ ಬದಲಾಗಿ ಹಿಂದೂಗಳ ಅಂಗಡಿಗಳಲ್ಲಿ ಸಿಂಗಾರದ ಇತರ ವಸ್ತುಗಳನ್ನು ಖರೀದಿ ಮಾಡುವಂತೆ ಅಭಿಯಾನ ನಡೆಸಲಾಗುತ್ತಿದೆ. ರಾಜ್ಯದಲ್ಲಿರುವ ಎಲ್ಲಾ ಗಣೇಶ ಉತ್ಸವ […]