ಕಸ ಗುತ್ತಿಗೆದಾರರಿಂದ ಮುಷ್ಕರ, ಶುಕ್ರವಾರದಿಂದ ಗಬ್ಬು ನಾರಲಿದೆ ಬೆಂಗಳೂರು..!

ಬೆಂಗಳೂರು, ಫೆ.16- ಕಳೆದ ಆರು ತಿಂಗಳಿನಿಂದ ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಶುಕ್ರವಾರದಿಂದ ನಗರದ ಕಸ ವಿಲೇವಾರಿ ಮಾಡದಿರಲು ನಿರ್ಧರಿಸಿದ್ದಾರೆ. ಬೆಂಗಳೂರು ಕಸದ ಗುತ್ತಿಗೆದಾರರು ಪ್ರತಿಭಟನೆ ತೀವ್ರಗೊಳಿಸಿದರೆ ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ, ಐಟಿ-ಬಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರು ಮಹಾನಗರ ಗಾರ್ಬೇಜ್ ಸಿಟಿಯಾಗಿ ಗಬ್ಬೆದ್ದು ನಾರುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಿಬಿಎಂಪಿಯಲ್ಲಿ ಸರ್ವಾಕಾರಿ ಧೋರಣೆ, ಏಕಚಕ್ರಾಪತ್ಯ ನಡೆಸುತ್ತಿರುವ ಹಣಕಾಸು ವಿಶೇಷ ಆಯುಕ್ತ ತುಳಸಿ ಮದ್ದಿನೇನಿ ಅವರ ಧೋರಣೆಯಿಂದ ನಮಗೆ ಬಾಕಿ ಬಿಲ್ ಪಾವತಿಯಾಗುತ್ತಿಲ್ಲ. ಇದರ ವಿರುದ್ಧ […]