ಜಿಎಟಿಇ ಪರೀಕ್ಷೆ ಮುಂದೂಡಲು ಕೋರಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

ನವದೆಹಲಿ,ಫೆ.2- ಈ ತಿಂಗಳ 5ರಂದು ನಡೆಯಬೇಕಾಗಿದ್ದ ಗ್ರ್ಯಾಜುಯೇಟ್ ಆ್ಪಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್(ಜಿಎಟಿಇ) ಪರೀಕ್ಷೆಯನ್ನು ಕೋವಿಡ್ ಸಾಂಕ್ರಾಮಿಕ ಸನ್ನಿವೇಶದಿಂದಾಗಿ ಮುಂದೂಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆ ನಡೆಸಲು ಸುಪ್ರೀಂಕೊರ್ಟ್ ಇಂದು ಸಮ್ಮತಿ ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರನನೊಳಗೊಂಡ ನ್ಯಾಯಪೀಠವು ವಕೀಲ ಪಲ್ಲವ್ ವೇಂಗಿಯಾ ವರ ಹೇಳಿಕೆಗಳನ್ನು ಪರಿಗಣಿಸಿ ಮನವಿಯನ್ನು ವಿಚಾರಣೆಗೆ ಅಂಗೀಕರಿಸಿತು. ಜಿಎಟಿಇಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ಮನವಿ ಸಲ್ಲಿಸಲಾಗಿತ್ತು.