ಯುರೋಪಿಯನ್ ದೇಶಗಳಿಗೆ ಅನಿಲ ಪೂರೈಕೆ ಸ್ಥಗಿತ : ರಷ್ಯಾ ಘೋಷಣೆ
ಮಾಸ್ಕೋ, ಆ.20- ರಷ್ಯಾದ ಪ್ರಮುಖ ನೈಸರ್ಗಿಕ ಅನಿಲ ಪೈಪ್ಲೈನ್ ತಿಂಗಳ ಅಂತ್ಯದಲ್ಲಿ ಮೂರು ದಿನಗಳ ನಿರ್ವಹಣೆಗಾಗಿ ಸ್ಥಗಿತಗೊಳ್ಳಲಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿ ಗಾಜ್ಪ್ರೊಮ್ ಘೋಷಿಸಿದ್ದು ಇದರಿಂದಾಗಿ ಜರ್ಮನಿ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳ ಮೇಲೆ ಒತ್ತಡ ಹೆಚ್ಚದೆ. ವಿದ್ಯುತ್ ಉತ್ಪಾದಿಸಲು, ಮನೆಗಳನ್ನು ಬಿಸಿ ಹವೆಯಲ್ಲಿಡಲು ಮತ್ತಿತರ ಕೈಗಾರಿಕೆ ವಲಯ ನಿರ್ವಹಣೆಗೆ ಅನಿಲ ಬಹು ಅವಶ್ಯವಾಗಿದ್ದು ಬದಲಿ ವ್ಯವಸ್ಥೆ ಬಗ್ಗೆ ಚಿಂತೆ ಆವರಿಸಿದೆ. ಪೈಪ್ಲೈನ್ನಲ್ಲಿ ತಾಂತ್ರಿಕ ದೋಷ ಸರಿಪಡಿಸಲು ಈ ಕ್ರಮ ಎಂದು ರಷ್ಯಾ ಹೇಳಿದೆ […]