ಭಾರತೀಯ ಕುಸ್ತಿ ಸಂಸ್ಥೆಯ ಸಾಮಾನ್ಯಸಭೆ ರದ್ದು

ಅಯೋಧ್ಯೆ,ಜ.22- ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ, ಹಣಕಾಸಿನ ಅಕ್ರಮಗಳು ಸೇರಿದಂತೆ ಹಲವು ಆರೋಪಗಳಿಗೆ ಗುರಿಯಾಗಿರುವ ಅಖಿಲ ಭಾರತೀಯ ಕುಸ್ತಿ ಸಂಸ್ಥೆಯ (ಡಬ್ಲ್ಯುಎಫ್‍ಐ) ತುರ್ತು ಸಾಮಾನ್ಯ ಸಭೆ ರದ್ದುಗೊಂಡಿದೆ. ಕೇಂದ್ರ ಸರ್ಕಾರದ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಸೂಚನೆಯ ಮೇರೆಗೆ ಡಬ್ಲ್ಯುಎಫ್‍ಐ ಎಲ್ಲಾ ಚಟುವಟಿಕೆಗಳು ಅಮಾನತುಗೊಂಡಿವೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ನಡೆಯಬೇಕಿದ್ದ ತುರ್ತು ಸಾಮಾನ್ಯ ಸಭೆ ರದ್ದುಗೊಂಡಿದೆ. ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಭದ್ರಕೋಟೆಯಾಗಿರುವ ಉತ್ತರ ಪ್ರದೇಶದ ಗೊಂಡಾದಲ್ಲಿ ಆಯೋಜಿಸಲಾಗಿದ್ದ ರ್ಯಾಂಕಿಂಗ್ ಟೂರ್ನಮೆಂಟ್ […]