ಫ್ಲಾಯ್ಡ್ ಹತ್ಯೆ ಪ್ರಕರಣದ ವಿಚಾರಣೆಗೆ ನೇಮಕಾವಾದ ಬಹುತೇಕ ಜ್ಯೂರಿಗಳು ಶ್ವೇತವರ್ಣೀಯರು

ಸೇಂಟ್‍ಪಾಲ್(ಅಮೆರಿಕ),ಜ.21-ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣದ ಫೆಡರಲ್ ವಿಚಾರಣೆಗೆಂದು ನೇಮಿಸಲಾದ 18 ಮಂದಿ ಜ್ಯೂರಿಗಳ ತಂಡದಲ್ಲಿ ಹೆಚ್ಚಿನ ಶ್ವೇತ ವರ್ಣೀಯರನ್ನು ಆಯ್ಕೆ ಮಾಡಲಾಗಿದೆ. ಈ ಜ್ಯೂರಿಗಳನ್ನು ಟೌ ತಾವೋ, ಥಾಮಸ್ ಲೇನ್ ಮತ್ತು ಜೆ.ಕುಯೆಂಗ್ ಈ ಅಕಾರಿಗಳ ವಿರುದ್ಧದ ತನಿಖೆಗಾಗಿ ನೇಮಿಸಲಾಗಿದೆ. 12 ಜ್ಯೂರರ್‍ಗಳ ಪೈಕಿ ಓರ್ವ ಏಷ್ಯನ್ ಮೂಲದವರೂ ಸೇರಿದ್ದಾರೆ. ಯಾವುದೇ ಪರ್ಯಾಯ ವ್ಯಕ್ತಿಗಳ ಅಗತ್ಯವಿಲ್ಲದಿದ್ದರೆ ಏಷ್ಯನ್ ಮೂಲದ ಎರಡನೇ ವ್ಯಕ್ತಿಯು ಆರು ಬದಲಿ ಜ್ಯೂರಿಗಳಲ್ಲಿರಲಿದ್ದಾರೆ. ಉಳಿದೆಲ್ಲರೂ ಶ್ವೇತ ವರ್ಣೀಯರಾಗಿದ್ದಾರೆ. ನ್ಯಾಯಾಲಯವು ಜನಾಂಗೀಯ ಮಾಹಿತಿ ನೀಡಲು ನಿರಾಕರಿಸಿದೆ.