ಜಾರ್ಜ್ ಸೋರಸ್‍ಗೆ ಚಿದು ಗುದ್ದು

ವಾಷಿಂಗ್ಟನ್,ಫೆ.18- ಉದ್ಯಮಿ ಗೌತಮ್ ಆದಾನಿ ಕುರಿತ ಹಿಂಡನ್‍ಬರ್ಗ್ ಸಂಶೋಧನಾ ವರದಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಬಗ್ಗೆ ಅಮೆರಿಕದ ಶತಕೋಟಿ ಬಂಡವಾಳ ಹೂಡಿಕೆದಾರ ಜಾರ್ಜ್ ಸೋರಸ್ ನೀಡಿರುವ ಹೇಳಿಕೆ ನಂಬಲರ್ಹವಾಗಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ. ಸೋರಸ್ ಈ ಹಿಂದೆ ನೀಡಿದ್ದ ಹೇಳಿಕೆಗಳು ಅಪ್ರಬುದ್ದವಾಗಿದ್ದವು. ಈಗ ನೀಡಿರುವ ಹೇಳಿಕೆಯನ್ನು ನಂಬಲು ಸಾಧ್ಯವಿಲ್ಲ ಎಂದು ಚಿದು ಟ್ವಿಟ್ ಮಾಡಿದ್ದಾರೆ. ಸೋರಸ್ ಅವರ ಹೇಳಿಕೆಯನ್ನು ಗಮನಿಸಿದರೆ ಅವರು, ಪ್ರಜಾಸತಾತ್ಮಕವಾಗಿ ರಚನೆಯಾದ ಸರ್ಕಾರವನ್ನು ಕೆಡವುವ ಉದ್ದೇಶ ಹೊಂದಿದ್ದಾರೆ ಎಂಬುದು […]