ಅತ್ತ ಚುನಾವಣೆ ಸಿದ್ಧತೆ, ಇತ್ತ ಸೀರೆ-ಕುಕ್ಕರ್-ಬಾಡೂಟ ಪೈಪೋಟಿ

ಬೆಂಗಳೂರು,ಮಾ.9- ವಿಧಾನಸಭೆ ಚುನಾವಣೆ ಪೂರ್ವ ಸಿದ್ದತೆಗೆ ಕೇಂದ್ರ ಚುನಾವಣಾ ಆಯೋಗ ರಾಜ್ಯಕ್ಕೆ ಭೇಟಿ ಕೊಟ್ಟ ಬೆನ್ನಲ್ಲೇ ವಿವಿಧ ರಾಜಕೀಯ ಪಕ್ಷಗಳು ಮತದಾರರಿಗೆ ನಾನಾ ರೀತಿಯ ಆಸೆ, ಆಮಿಷಗಳನ್ನು ಒಡ್ಡುತ್ತಿದ್ದು, ಗಿಫ್ಟ್ ಪಾಲಿಟಿಕ್ಸ್ ಜೋರಾಗಿದೆ. ಸೀರೆ, ಕುಕ್ಕರ್, ಬಾಡೂಟ, ಧಾರ್ಮಿಕ ಕ್ಷೇತ್ರ ಗಳಿಗೆ ಪ್ರವಾಸ, ರಸಮಂಜರಿ ಕಾರ್ಯಕ್ರಮ, ಕ್ರೀಡಾಕೂಟಗಳ ಆಯೋಜನೆ, ಸ್ತ್ರೀ ಶಕ್ತಿ ಸಂಘಟನೆಗಳಿಗೆ ಆರ್ಥಿಕ ನೆರವು ಹೀಗೆ ನಾನಾ ರೀತಿ ಮತದಾರರನ್ನು ಸೆಳೆಯಲು ಮುಖಂಡರು ಕಸರತ್ತು ನಡೆಸುತ್ತಿದ್ದಾರೆ. ಕೆಲವು ಕಡೆ ಮತದಾರರಿಗೆ ಶರ್ಟ್, ಪಂಚೆ ಜೊತೆಗೆ ಮದ್ಯವನ್ನು […]