ಗುರುಗ್ರಾಮ್‍ನಲ್ಲಿ ಡ್ರೋನ್‍ಗಳು, ಗಾಳಿಪಟಗಳ ನಿಷೇಧ

ಗುರುಗ್ರಾಮ್, ಜ.14-ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿನ ಜಿಲ್ಲಾಡಳಿತವು ಸಿಆರ್‍ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಹಾರುವ ಡ್ರೋನ್‍ಗಳು, ಮೈಕ್ರೋಲೈಟ್ ಏರ್‍ಕ್ರಾಫ್ಟ್‍ಗಳು, ಗ್ಲೈಡರ್‍ಗಳು, ಬಿಸಿ ಗಾಳಿಯ ಬಲೂನ್‍ಗಳು, ಗಾಳಿಪಟಗಳನ್ನು ಜನವರಿ 26 ರವರೆಗೆ ನಿಷೇಸಲಾಗಿದೆ ಎಂದು ಜಿಲ್ಲಾಧಿಕಾರಿ ನಿಶಾಂತ್ ಕುಮಾರ್ ಯಾದವ್ ಆದೇಶದಲ್ಲಿ ತಿಳಿಸಿದ್ದಾರೆ. ಗಣರಾಜ್ಯೋತ್ಸವದಂದು ಸಮಾಜಘಾತುಕ ಚಟುವಟಿಕೆಗಳನ್ನು ತಡೆಯಲು ಭದ್ರತಾ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಆದೇಶ ಹೊರಡಿಸಲಾಗಿದೆ. ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು […]