ಭಾರೀ ಸ್ಪೋಟಕ್ಕೆ ನಡೆದಿತ್ತಾ ಸಂಚು..?

ನವದೆಹಲಿ,ನ.23- ಮಂಗಳೂರು ನಾಗೋರಿಯಲ್ಲಿ ಸಂಭವಿಸಿರುವ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಮತ್ತು ತಮಿಳುನಾಡಿನ ಕೊಯಮತ್ತೂರು ಸ್ಪೋಟದ ಆರೋಪಿ ಸೇರಿ ಇಬ್ಬರು ಏಕಕಾಲಕ್ಕೆ ಕೇರಳದಲ್ಲಿ ತಂಗಿರುವ ಮಾಹಿತಿ ಬೆಳಕಿಗೆ ಬಂದಿದ್ದು, ಪ್ರಕರಣ ಮತ್ತಷ್ಟು ಆತಂಕಕಾರಿಯಾಗಲಾರಂಭಿಸಿದೆ. ಅಕ್ಟೋಬರ್ 23ರಂದು ಕೊಯಮತ್ತೂರಿನಲ್ಲಿ ಬಾಂಬ್ ಸ್ಪೋಟವಾಗಿತ್ತು. ಅದರ ಪ್ರಮುಖ ಆರೋಪಿ ಜಮೇಸ್ಮೊಬಿನ್ ಚಿಕಿತ್ಸೆ ನೆಪದಲ್ಲಿ ಸೆಪ್ಟಂಬರ್ ಎರಡನೇ ವಾರದಲ್ಲಿ ಕೇರಳಕ್ಕೆ ಭೇಟಿ ನೀಡಿದ್ದ ದಾಖಲೆಗಳು ಪತ್ತೆಯಾಗಿವೆ. ಮಂಗಳೂರಿನ ಕುಕ್ಕರ್ ಬಾಂಬ್ ಸ್ಪೋಟದ ಆರೋಪಿ ಶಾರಿಕ್ ಕೂಡ ಸೆಪ್ಟಂಬರ್ 13ರಿಂದ 18ರವರೆಗೂ ಐದು […]

ಆನಂದರಾವ್ ವೃತ್ತದ ಬಳಿ ಬೃಹತ್ ಅವಳಿ ಗೋಪುರ ನಿರ್ಮಾಣ

ಬೆಂಗಳೂರು,ನ.19- ನಗರದಲ್ಲಿ ಬಾಡಿಗೆ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ 25 ಮಹಡಿಗಳ ಅವಳಿ ಗೋಪುರ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ವಿಕಾಸ ಸೌಧದ ಪಕ್ಕದಲ್ಲಿರುವ ಬಹುಮಹಡಿ ಕಟ್ಟಡ, ಶಾಂತಿನಗರದ ಬಿಎಂಟಿಸಿ ಟರ್ಮಿನಸ್, ಕೋರಮಂಗಲದ ಕೇಂದ್ರೀಯ ಸದನ್, ವಿವಿ ಟವರ್ಸ್, ಆನಂದ್ ರಾವ್ ಸರ್ಕಲ್ ಫ್ಲೈಓವರ್ ಬಳಿ ಸೇರಿದಂತೆ ವಿವಿಧೆಡೆ ಸರ್ಕಾರಿ ಕಚೇರಿಗಳಿವೆ. ಈ ಎಲ್ಲಾ ಸರ್ಕಾರಿ ಕಚೇರಿಗಳನ್ನು ಒಂದೇ ಸ್ಥಳದಲ್ಲಿ ತರಲು 2020 ರಲ್ಲಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವಳಿ ಗೋಪುರ ಪ್ರಸ್ತಾವನೆ ತರಲಾಗಿತ್ತು. […]

ವಿಶ್ವ ಹಸಿವು ಸೂಚ್ಯಂಕದಲ್ಲಿ 107ನೇ ಸ್ಥಾನಕ್ಕೆ ಕುಸಿದ ಭಾರತ

ನವದೆಹಲಿ,ಅ.23- ವಿಶ್ವ ಹಸಿವು ಸೂಚ್ಯಂಕದಲ್ಲಿ ಭಾರತದ ಕಳಪೆ ಸಾಧನೆ ಮುಂದುವರೆದಿದೆ. 121 ದೇಶಗಳಲ್ಲಿ 2022 ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 107 ನೇ ಸ್ಥಾನಕ್ಕೆ ಕುಸಿದಿದೆ. ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ, ಭಾರತವು 5 ಟ್ರಿಲಿಯನ್ ಆರ್ಥಿಕತೆ ಹೊಂದುವ ಮೂಲಕ ಉದಯೋನ್ಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದರೂ ಹಸಿವು ಸೂಚ್ಯಂಕದಲ್ಲಿ ಹಿಂದೆ ಬಿದ್ದಿರುವುದು ಆಘಾತಕಾರಿ ವಿಷಯವಾಗಿದೆ. ವಿಪರ್ಯಾಸವೆಂದರೆ, ಭಾರತ ಯುದ್ಧದಿಂದ ಕುಗ್ಗಿ ಹೋಗಿರುವ ಅಫ್ಘಾನಿಸ್ತಾನಕ್ಕಿಂತ ಕೇವಲ ಎರಡು ಸ್ಥಾನದಲ್ಲಿ ಮುಂದಿದೆ. ಇದರ ಜೊತೆಗೆ […]

ಆಘಾತಕಾರಿ ಸಂಗತಿ, ವಿಶ್ವಾದ್ಯಂತ ವನ್ಯಜೀವಿಗಳ ಸಂಖ್ಯೆಯಲ್ಲಿ 69% ಕುಸಿತ..!

ನವದೆಹಲಿ.ಅ.13-ಕಳೆದ 1970 ಮತ್ತು 2018 ರ ನಡುವೆ ಜಗತ್ತಿನಾದ್ಯಂತ ವನ್ಯಜೀವಿಗಳ ಸಂಖ್ಯೆಯು ಶೇಕಡಾ 69 ರಷ್ಟು ಕುಸಿದಿದೆ ಎಂದು ವಿಶ್ವ ವನ್ಯಜೀವಿ ಸಂಸ್ಥೆಯ ತಿಳಿಸಿದೆ. ಲಿವಿಂಗ್ ಪ್ಲಾನೆಟ್ ವರದಿ 2022 ರ ಪ್ರಕಾರ ಉಷ್ಣವಲಯದ ಪ್ರದೇಶಗಳಲ್ಲಿ ವನ್ಯಜೀವಿಗಳ ಜನಸಂಖ್ಯೆಯು ದಿಗ್ಭ್ರಮೆಗೊಳಿಸುವ ದರದಲ್ಲಿ ಕುಸಿಯುತ್ತಿದೆ ಎಂದು ಎಚ್ಚರಿಸಲಾಗಿದೆ. ಅಮೇರಿಕಾ ಮತ್ತು ಕೆರಿಬಿಯನ್ ಪ್ರದೇಶಗಳು ಜಾಗತಿಕವಾಗಿ ಮೇಲ್ವಿಚಾರಣೆ ಮಾಡಿದ ವನ್ಯಜೀವಿ ಜನಸಂಖ್ಯೆಯ ಅತಿದೊಡ್ಡ ನಷ್ಟ ಉಂಟಾಗಿದೆ ಈ ಅವಧಿಯಲ್ಲಿ ಸರಾಸರಿ ಶೇಕಡಾ 94 ರಷ್ಟು ಕುಸಿತವಾಗಿದೆ ಎಂದು ವರದಿ ಹೇಳಿದೆ. […]

ಜಗತ್ತಿನ ಅಸ್ಥಿರತೆ ಸರಿಪಡಿಸುವ ಶಕ್ತಿ ಭಾರತಕ್ಕೆ ಇದೆ : ಎಸ್.ಜೈಶಂಕರ್

ವಾಷಿಂಗ್ಟನ್, ಸೆ.29- ಜಗತ್ತಿನಲ್ಲಿ ಆಶಾವಾದಿ ಸನ್ನಿವೇಶ ಇಲ್ಲದಿರುವ ಮತ್ತು ಆತಂಕದ ಸಮಯದಲ್ಲಿ ಭಾರತವು ಪರಿಸ್ಥಿತಿ ಸ್ಥಿರಗೊಳಿಸುವ ಮತ್ತು ಸೇತುವೆಯ ಪಾತ್ರವಹಿಸುತ್ತದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತಿಕ ಆರ್ಥಿಕತೆಯ ಅಪಾಯವನ್ನು ನಿವಾರಿಸುವಲ್ಲಿ ಭಾರತ ಕೊಡುಗೆ ನೀಡಬಹುದು ಮತ್ತು ರಾಜಕೀಯ ಪರಿಭಾಷೆಯಲ್ಲಿ, ಕೆಲವು ರೀತಿಯಲ್ಲಿ ಜಗತ್ತನ್ನು ಅಭಿವೃದ್ದಿ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು. ತುಂಬಾ ಚಿಂತಿತರಾಗಿರುವ ಅಂತರರಾಷ್ಟ್ರೀಯ ಸಮುದಾಯವನ್ನು ನೋಡುತ್ತಿದ್ದೇವೆ. ಬಹಳಷ್ಟು ಕಷ್ಟಕರ ಪರಿಸ್ಥಿತಿಯಲ್ಲಿ ಭಾರತ ಸಂಬಂಧ ಸೇತುವಾಗಿ ಕಾರ್ಯ ನಿರ್ವಹಿಸುವ […]

ಪಾಕಿಸ್ತಾನ, ಶ್ರೀಲಂಕಾಗಿಂತಲೂ ಭಾರತದಲ್ಲೇ ನಿರುದ್ಯೋಗ ಹೆಚ್ಚು

ನವದೆಹಲಿ, ಆ.8- ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ನಿರುದ್ಯೋಗದ ಸಮಸ್ಯೆ ತೀವ್ರವಾಗಿ ಹೆಚ್ಚಾಗಿದ್ದು, ಪಾಕಿಸ್ತಾನ, ಶ್ರೀಲಂಕಾಗಿಂತಲೂ ದನನೀಯ ಸ್ಥಿತಿಯಲ್ಲಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ, ಜಾಗತಿಕ ನಿರುದ್ಯೋಗದ ಸೂಚ್ಯಂಕವನ್ನು ಮರುಪ್ರಕಟಿಸಿದ್ದು, ಅಗತ್ಯ ಇರುವುದು ಮನೆ ಮನೆಗೆ ಉದ್ಯೋಗ ತಲುಪಿಸುವುದು, ಆದರೆ ವಾಸ್ತವವಾಗಿರುವುದು ಪ್ರತಿ ಮನೆಯಲ್ಲೂ ನಿರುದ್ಯೋಗವಿದೆ ಎಂದು ಕಿಡಿಕಾರಿದ್ದಾರೆ. 15ರಿಂದ 24 ವರ್ಷದೊಳಗಿನ ನಿರುದ್ಯೋಗದ ಪ್ರಮಾಣ ಜಪಾನ್‍ನಲ್ಲಿ ಶೇ.4.4ರಷ್ಟಿದ್ದರೆ, ಜರ್ಮನಿಯಲ್ಲಿ ಶೇ.6.9ರಷ್ಟಿದೆ, ಇಸ್ರೇಲ್‍ನಲ್ಲಿ ಶೇ.8.8, ಪಾಕಿಸ್ತಾನದಲ್ಲಿ 9.4, ನೇಪಾಳದಲ್ಲಿ […]

ಮಂಕಿ ಫಾಕ್ಸ್ : ಜಾಗತಿಕ ತುರ್ತು ಪರಿಸ್ಥಿತಿ ಘೋಷಣೆ

ನವದೆಹಲಿ, ಆ.1- ಕೋವಿಡ್ ಬಳಿಕ ಮಂಕಿಫಾಕ್ಸ್ ಸೋಂಕು ಹರಡುವಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದ್ದು, ರೋಗ ಹರಡುವಿಕೆ ಮೇಲೆ ತೀವ್ರ ನಿಗಾ ವಹಿಸಿದೆ. ವಿಶ್ವದ ಸುಮಾರು 75 ರಾಷ್ಟ್ರಗಳಲ್ಲಿ 16 ಸಾವಿರಕ್ಕೂ ಹೆಚ್ಚು ಮಂದಿ ಮಂಕಿ ಫಾಕ್ಸ್ ಸೋಂಕಿಗೆ ಸಿಲುಕಿದ್ದಾರೆ. ಹೀಗಾಗಿ ಇತ್ತೀಚೆಗೆ ಸಭೆ ನಡೆಸಿದ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದೆ. ಈ ಹಿಂದೆ ಎಬೋಲಾ, ಹೆಚ್-1ಎನ್-1, ಜೈಕಾ, ಕೋವಿಡ್-19 ಸೇರಿದಂತೆ 7ಕ್ಕೂ ಹೆಚ್ಚು […]