ಅಧಿಕಾರಿಗಳ ಚಳಿ ಬಿಡಿಸಿದ ಬಿಬಿಎಂಪಿ ಆಯುಕ್ತರು

ಬೆಂಗಳೂರು,ಅ.20- ಕಳೆದ ಮೂರು ದಿನಗಳಿಂದ ನಿರಂತರವಾಗಿ ಕಾಲ್ನಡಿಗೆ ಮೂಲಕ ಸಾರ್ವಜನಿಕರ ಸಮಸ್ಯೆ ಆಲಿಸುತ್ತಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಇಂದು ಸಮರ್ಪಕವಾಗಿ ಕೆಲಸ ಮಾಡದಿರುವ ಬಿಬಿಎಂಪಿ ಅಧಿಕಾರಿಗಳಿಗೆ ಚಳಿ ಬಿಡಿಸಿದರು. ಮಹಾ ಮಳೆಗೆ ನಲುಗಿದ ಬೆಂಗಳೂರು, ಕೊಚ್ಚಿಹೋದ ವಾಹನಗಳು ಇಂದು ರಾಜರಾಜೇಶ್ವರಿ ನಗರ ವಲಯದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಈ ಸಂದರ್ಭದಲ್ಲಿ ನೂರಾರು ಸ್ಥಳೀಯರು ಆಯುಕ್ತರಿಗೆ ಸಮಸ್ಯೆಗಳ ಸರಮಾಲೆಯಲ್ಲೇ ಸ್ವಾಗತ ಕೋರಿದರು.ಡ್ರೈನೇಜ್ ಸಿಸ್ಟಮ್ ಚೆನ್ನಾಗಿಲ್ಲ ತುಂಬಾ ನೀರು ಬರುತ್ತೆ ಮಳೆ […]