ಆಭರಣ ಮಾಡಿಕೊಡುವುದಾಗಿ ಚಿನ್ನದ ಗಟ್ಟಿ ಪಡೆದು ವಂಚಿಸಿದ್ದ ಆರೋಪಿ ಅರೆಸ್ಟ್

ಬೆಂಗಳೂರು, ಫೆ.25- ಆಭರಣ ಮಾಡಿಕೊಡುವುದಾಗಿ ನಂಬಿಸಿ ಚಿನ್ನದ ಗಟ್ಟಿ ಪಡೆದು ವಂಚಿಸಿದ್ದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿ 50 ಲಕ್ಷ ರೂ. ಮೌಲ್ಯದ 1 ಕೆಜಿ ಚಿನ್ನದ ಆಭರಣಗಳನ್ನುವಶಪಡಿಸಿಕೊಂಡಿದ್ದಾರೆ. ಕೊಲ್ಕತ್ತಾ ಮೂಲದ ಅಮರ್ ಮೊಹಂತ್(33) ಬಂಧಿತ ಆರೋಪಿ. ಈತ ಚಿನ್ನದ ಗಟ್ಟಿಯನ್ನು ಮಾರಿ ಮನೆ ಖರೀದಿಸಿ ಮಗಳ ಮದುವೆ ಮಾಡಿ ಮೋಜಿನ ಜೀವನ ನಡೆಸುತ್ತಿದ್ದನು. ಜಯನಗರ 3ನೆ ಬ್ಲಾಕ್, 8ನೆ ಮುಖ್ಯರಸ್ತೆಯಲ್ಲಿನ ತಿರುಮಲ ಜ್ಯುವೆಲ್ಸ್‍ನಲ್ಲಿ ಆಭರಣ ತಯಾರಕ ನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಅಮರ್ ಮೊಹಂತ್ ಚಿನ್ನಾಭರಣ […]