ಮನೆಗಳ ಮುಂದೆ ನ್ಯೂಸ್ ಪೇಪರ್- ಕಸ ಗಮನಿಸಿ ಮನೆಗಳ್ಳತನ ಮಾಡುತ್ತಿದ್ದ ನಾಲ್ವರು ಸೆರೆ

ಬೆಂಗಳೂರು, ಜ. 5- ಬಾಗಿಲು ಮುಂಭಾಗ ದಿನ ಪತ್ರಿಕೆಗಳು ಮತ್ತು ಕಸ ಬಿದ್ದಿರುವುದನ್ನು ಗಮನಿಸಿ ಹಗಲು ಮತ್ತು ರಾತ್ರಿ ವೇಳೆ ಮನೆಗಳ ಬೀಗ ಮುರಿದು ಚಿನ್ನಾಭರಣ ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿ 15.95 ಲಕ್ಷ ಮೌಲ್ಯದ ಚಿನ್ನಾಭರಣಗಳು, ಕಾರು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆನೆಕಲ್ ತಾಲೂಕು ಚಂದಾಪುರದ ಸೂರ್ಯ ಸಿಟಿ ನಿವಾಸಿ ಗಣೇಶ ಅಲಿಯಾಸ್ ಟಚ್ಚು ಅಲಿಯಾಸ್ ವಿನಯ ಪ್ರಸಾದ್ ಅಲಿಯಾಸ್ ವಿಜಿ(23), ಚಿಕ್ಕಬಾಣವಾರದ ಲೋಹಿತ್(37), ನಾಯಂಡನಹಳ್ಳಿಯ ಗಂಗೊಂಡನಹಳ್ಳಿ ನಿವಾಸಿ […]