NH4ನಲ್ಲಿ ಮುಗಿಯದ ಕಾಮಗಾರಿ, ನಿಲ್ಲದ ಪ್ರಯಾಣಿಕರ ಪರದಾಟ

ಬೆಂಗಳೂರು,ಜ.17- ತುಮಕೂರು- ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ದುರಸ್ತಿ ಕಾಮಗಾರಿಯಿಂದಾಗಿ ಸಂಚಾರ ದಟ್ಟಣೆ ತೀವ್ರಗೊಂಡು ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ನಾಗಸಂದ್ರ ಸಮೀಪ ಗೊರಗುಂಟೆಪಾಳ್ಯ 8ನೇ ಮೈಲಿ ನಡುವಿನ ಮೇಲ್ಸೇತುವೆಯ ಪಿಲ್ಲರ್ 9 ಮತ್ತು 10ರಲ್ಲಿ ಲಿಂಕ್ ಸಡಿಲಗೊಂಡಿದ್ದು, ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿದೆ. ತಕ್ಷಣವೇ ಅಧಿಕಾರಿಗಳು ಎಚ್ಚೆತ್ತುಕೊಂಡು ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಭಾರೀ ಅನಾಹುತವೊಂದು ತಪ್ಪಿದೆ. ಆದರೆ ಕಾಮಗಾರಿ ನಿಗದಿತ ಅವಧಿಯಲ್ಲಿ ಮುಗಿಯದೇ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಮೇಲ್ಸೇತುವೆಯ ಲಿಂಕ್‍ಗಳನ್ನು ಸರಿಪಡಿಸಲು […]