ಮಾಲ್ಡೀವ್ಸ್‌ನಲ್ಲಿ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ

ಕೊಲಂಬೊ, ಜು.13 – ರಾಜೀನಾಮೆ ನೀಡುವ ಮುನ್ನವೇ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಮಾಲ್ಡೀವ್ಸ್‍ಗೆ ತೆರೆಳಿದ್ದಾರೆ.ಮಾಲ್ಡೀವ್ಸ್‍ಗೆ ರಾಜಧಾನಿ ಮಾಲೆಗೆ ಇಂದು ಬೆಳಗ್ಗೆ ಬಂದಿಳಿದಿದ್ದಾರೆ ಎಂದು ಮೂಲಗಳುತಿಳಿಸಿವೆ. ಮಾಲ್ಡೀವಿಯನ್ ಪ್ರಕಾರ ವೆಲಾನಾ ವಿಮಾನ ನಿಲ್ದಾಣದಲ್ಲಿ ಮಾಲ್ಡೀವ್ಸ್‍ ಸರ್ಕಾರದ ಪ್ರತಿನಿಧಿಯಿಂದ ಅವರನ್ನು ಬರಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಜನರ ದಂಗೆ ನಡುವೆ ಕೊಲಂಬೂದ ಅಧಿಕೃತ ಬಂಗಲೆಯಿಂದ ಪಲಾಯನ ಮಾಡಿದ್ದರು.