ಆಡಳಿತದ ಪಕ್ಷಿನೋಟ ಪುಸ್ತಕ ಬಿಡುಗಡೆ

ಬೆಂಗಳೂರು, ಜ.27- ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ನಾನು ಅಧಿಕಾರ ವಹಿಸಿಕೊಂಡು ನಾಳೆಗೆ ಆರು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಆಡಳಿತದ ಪಕ್ಷಿನೋಟದ ಪುಸ್ತಕ ಬಿಡುಗಡೆ ಮಾಡುತ್ತೇವೆ. ಯಾವುದೇ ಹೊಸ ಘೋಷಣೆ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಹೇಳಿದರು. ನಾಳೆ ಸಿಎಂ ಆಗಿ ಆರು ತಿಂಗಳು ಪೂರೈಕೆಯಾಗುತ್ತಿ ರುವುದಕ್ಕೆ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಗಿಫ್ಟ್ ನೀಡುತ್ತೀರಾ ಎಂಬ ವಿಚಾರಕ್ಕೆ ಸಂಬಂಸಿದಂತೆ ಪ್ರತಿಕ್ರಿಯಿಸಿದ ಅವರು, ಯಾವುದೇ ಅಚ್ಚರಿಯ ಘೋಷಣೆ ಇಲ್ಲ. ನಮ್ಮದು ಸ್ಪಂದನಾಶೀಲ ಸರ್ಕಾರ ಯಾವಾಗ ಸಮಸ್ಯೆ ಬಂದಿದ್ದವೋ ಅದಕ್ಕೆಲ್ಲ ನಾವು […]