ಕಾಂಗ್ರೆಸಿಗರು ತಮ್ಮ ಪಾಪ ಪರಿಹಾರಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ : ಕಾರಜೋಳ ಲೇವಡಿ

ಬಾಗಲಕೋಟೆ, ಫೆ.27-ಅಧಿಕಾರದಲ್ಲಿ ಇದ್ದಾಗ ಏನೂ ಮಾಡದ ಪಾಪ ಅವರನ್ನು ಕಾಂಗ್ರೆಸಿಗರನ್ನು ಕಾಡುತ್ತಿದ್ದು, ಆ ಪಾಪ ಪರಿಹಾರ ಮಾಡಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಕಾಂಗ್ರೆಸ್‍ನವರಿಗೆ ಹೊಸದು ಎನೂ ಅಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಣಗಳ ನಡುವೆ ಪೈಪೋಟಿ ನಡೆಯುತ್ತಿದೆ. ಇದರ ಮಧ್ಯದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ತಗಲಾಕಿಕೊಂಡಿದ್ದಾರೆ ಎಂದರು. ಬಜೆಟ್‍ನಲ್ಲಿ ಖಂಡಿತವಾಗಿಯೂನೀರಾವರಿಗೆ ಅದ್ಭುತ ಕೊಡುಗೆ ಕೊಡುತ್ತೇವೆ. ನಮ್ಮ […]