ರಾಜ್ಯದ ಎಲ್ಲಾ ಕೆರೆಗೆ ನೀರು ತುಂಬಿಸಲು 1.20 ಲಕ್ಷ ಕೋಟಿ ಅಗತ್ಯ : ಕಾರಜೋಳ

ಬೆಂಗಳೂರು,ಮಾ.8- ರಾಜ್ಯ ದಲ್ಲಿರುವ ಎಲ್ಲ ಕೆರೆಗಳಿಗೆ ನೀರು ತುಂಬಿಸಲು ಕನಿಷ್ಠ ಪಕ್ಷ 1,20,000 ಕೋಟಿ ಅನುದಾನ ಬೇಕಾಗುತ್ತದೆ. ಅನುದಾನದ ಲಭ್ಯತೆ ಮೇಲೆ ಹಂತ ಹಂತವಾಗಿ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ಶಾಸಕ ಭೀಮಾನಾಯಕ್ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಇಲಾಖೆಗೆ ವಾರ್ಷಿಕವಾಗಿ 40 ಸಾವಿರ ಕೋಟಿ ಅನುದಾನವನ್ನು ಸಹ ನೀಡುವುದಿಲ್ಲ. ಇನ್ನು ಎಲ್ಲ ಕೆರೆಗಳಿಗೆ ನೀರು ತುಂಬಿಸಲು ಅನುದಾನವನ್ನು ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದರು. ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ […]