ಆ್ಯಸಿಡ್ ದಾಳಿಗೊಳಗಾದ ಮಹಿಳೆಗೆ ಸರ್ಕಾರಿ ಉದ್ಯೋಗ : ಸಿಎಂ ಭರವಸೆ

ಬೆಂಗಳೂರು, ನ.1- ಆ್ಯಸಿಡ್ ದಾಳಿಗೆ ಒಳಗಾಗಿದ್ದ ಸಂತ್ರಸ್ತ ಮಹಿಳೆಗೆ ಸರ್ಕಾರಿ ಉದ್ಯೋಗ ಹಾಗೂ ಬೆಂಗಳೂರಿನಲ್ಲಿ ವಸತಿಯನ್ನು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದರು.ಕಳೆದ ಏ.28ರಂದು ಯುವತಿಯು ಆ್ಯಸಿಡ್ ದಾಳಿಗೆ ತುತ್ತಾಗಿದ್ದರು. ಸರ್ಕಾರದಿಂದ ಅನುಕಂಪದ ಅಧಾರದಲ್ಲಿ ಕೆಲಸ, ಮನೆ, ಪರಿಹಾರ ನೀಡುವ ಭರವಸೆಯನ್ನು ನೀಡಲಾಗಿತ್ತು. ಇದುವರೆಗೂ ಭರವಸೆ ಈಡೇರದ ಕಾರಣ ಇಂದು ಯುವತಿಯು ಆರ್‍ಟಿನಗರದಲ್ಲಿರುವ ಸಿಎಂ ನಿವಾಸಕ್ಕೆ ಆಗಮಿಸಿ ಬೊಮ್ಮಾಯಿ ಅವರಿಗೆ ವಸ್ತುಸ್ಥಿತಿಯನ್ನು ವಿವರಿಸಿದರು. ಯುವತಿಯನ್ನು ಮಮತೆಯಿಂದಲೇ ಆರೋಗ್ಯ ವಿಚಾರಿಸಿದ ಸಿಎಂ ಸರ್ಕಾರದಿಂದ ಏನೆಲ್ಲ ಸಹಾಯ […]