ಬಗರ್ ಹುಕುಂ ಭೂಮಿ ಮಂಜೂರು ಕುರಿತು ಕಂದಾಯ ಇಲಾಖೆ ಮಹತ್ವದ ಆದೇಶ

ಬೆಂಗಳೂರು,ಡಿ.14- ನಗರಗಳು ಮತ್ತು ನಗರ ಪುರಸಭೆ ಪರಿಮಿತಿಯೊಳಗೆ ಬಗರ್ ಹುಕುಂ ಭೂಮಿ ಮಂಜೂರು ಮಾಡುವ ಕುರಿತು ಕಂದಾಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಬಗರ್ ಹುಕುಂ ಸಾಗುವಳಿ ಭೂ ಮಂಜೂರಾತಿ ಭರವಸೆಯಡಿ ಸರಕಾರ ಹಲವು ಬಾರಿ ಅರ್ಜಿ ಸ್ವೀಕರಿಸಿದೆ. ಇದರ ನಡುವೆಯೇ ಷರತ್ತು, ನಿಯಮದ ಹೆಸರಲ್ಲಿ ಭೂ ಮಂಜೂರಾತಿಯನ್ನು ತಡೆದಿದೆ. ಸುಮಾರು 3 ದಶಕದಿಂದ ಅರ್ಜಿದಾರರು ಮಾತ್ರ ಜಾತಕಪಕ್ಷಿಯಂತೆ ಕಾದರೂ ಹಕ್ಕುಪತ್ರ ಮಾತ್ರ ದೊರೆತಿರಲಿಲ್ಲ. ಬಗರ್ ಹುಕುಂ ಸಾಗುವಳಿ ರೈತರಿಗೆ ಇದೀಗ ಫಾರಂ-57ರಡಿ ಅರ್ಜಿ ಸಲ್ಲಿಸಲು ಸರಕಾರ […]