ಬೆಂಗಳೂರು ಮೂಲದ ರಿಕಿಕೇಜ್‍ಗೆ 3ನೇ ಗ್ರ್ಯಾಮಿ ಪ್ರಶಸ್ತಿ ಗರಿ

ಲಾಸ್ ಏಂಜಲ್ಸ್,ಫೆ.6- ಭಾರತೀಯ ಮೂಲದ ಸಂಗೀತ ನಿರ್ದೇಶಕ ರಿಕಿಕೇಜ್ ಮೂರನೇ ಭಾರಿಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದು, ಅದನ್ನು ತವರು ನೆಲಕ್ಕೆ ಸಮರ್ಪಿಸಿದ್ದಾರೆ. 65ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿಗಳು ಪ್ರಕಟವಾಗಿದೆ. ಬೆಂಗಳೂರು ಮೂಲದ ಅಮೆರಿಕಾ ಸಂಜಾತ ಸಂಗೀತಗಾರ ರಿಕಿಕೇಜ್, ತಮ್ಮ ಆಲ್ಬಂ ತಯಾರಿಕೆಗೆ ಸಹಕರಿಸಿದ ಬ್ರಿಟಿಷ್ ರಾಕ್ ಬ್ಯಾಂಡ್ ಸ್ಟೀವರ್ಟ್ ಕೋಪ್ಲ್ಯಾಂಡ್ ಅವರೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಡಿವೈನ್ ಟೈಡ್ಸ್ (ಆಧ್ಯಾತ್ಮಿಕ ಅಲೆಗಳು) ಶಿರ್ಷಿಕೆಯಡಿ ತಯಾರಿಸಿದ ಆಡಿಯೊ ಆಲ್ಬಮ್‍ನಲ್ಲಿ ಯಶಸ್ವಿ ಜೋಡಿ ಗ್ರಾಮಫೋನ್ ಟ್ರೋಫಿಯನ್ನು ಗಳಿಸಿದೆ. ಅತ್ಯುತ್ತಮ ಹೊಸ […]