ತಮಿಳುನಾಡಿನಲ್ಲಿ ಸಿದ್ದುಗೆ ಅದ್ಧೂರಿ ಸ್ವಾಗತ

ಚನ್ನೈ,ಜು.30- ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ ಕರ್ನಾಟಕದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ತಮಿಳುನಾಡು ಕಾಂಗ್ರೆಸ್ ಹಾಗೂ ವಿಡುದಲೈ ಚಿರುದೈಗಳ್ ಪಕ್ಷದ ಮುಖಂಡರು ಆತ್ಮೀಯವಾಗಿ ಸ್ವಾಗತಿಸಿದರು. ವಿಮಾನ ನಿಲ್ದಾಣದಲ್ಲಿ ಸೇರಿದ್ದ ಸಾವಿರಾರು ಕಾರ್ಯಕರ್ತರು ಸಿದ್ದರಾಮಯ್ಯ ಅವರಿಗೆ ಭವ್ಯ ಸ್ವಾಗತ ನೀಡಿದರು.ಜನಸ್ತೋಮದ ನೂಕು ನುಗ್ಗಲ ನಡುವೆ ಸಿದ್ದರಾಮಯ್ಯ ಅವರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿ, ಗಡಿ ರೇಖೆಗಳನ್ನು ಮೀರಿ ದೇಶದ ಉದ್ದಗಲಕ್ಕೂ ನನ್ನ ಸೈದ್ಧಾಂತಿಕ ನಿಲುವಿನ ಜತೆಗೆ ನಿಂತಿರುವ ಜನರೇ ನನ್ನ ರಾಜಕೀಯ ಶಕ್ತಿ ಎಂದು ಎಲ್ಲರಿಗೂ […]