ಅಜ್ಜಿ ಸಾವನ್ನಪ್ಪಿದ್ದರಿಂದ ಗಾಬರಿಗೊಂಡು ಮೊಮ್ಮಗಳು ಆತ್ಮಹತ್ಯೆ

ಬೆಂಗಳೂರು,ಫೆ.25- ಅಜ್ಜಿ ಸಾವನ್ನಪ್ಪಿದ್ದರಿಂದ ಗಾಬರಿಗೊಂಡು ಮೊಮ್ಮಗಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾರುತಿ ನಗರದ ಜಯಮ್ಮ(70) ಮತ್ತು ಕೊಟ್ಟಿಗೆಪಾಳ್ಯದ ಮಮತಾ(24) ಮೃತಪಟ್ಟವರು. # ಘಟನೆ ವಿವರ: ಮಾರುತಿನಗರದ 17ನೇ ಕ್ರಾಸ್‍ನಲ್ಲಿ ಜಯಮ್ಮ ಅವರು ಮಗಳು ಮಂಜುಳಾ ಮತ್ತು ಮೊಮ್ಮಗ ಚೇತನ್‍ನೊಂದಿಗೆ ವಾಸವಾಗಿದ್ದರು. ಜಯಮ್ಮ ಅವರ ಮೊಮ್ಮಗಳು ಮಮತಾ ಎಂಕಾಂ ಪದವೀಧರೆಯಾಗಿದ್ದು, ಕೊಟ್ಟಿಗೆಪಾಳ್ಯದ ಯುವಕನೊಂದಿಗೆ ವಿವಾಹ ಮಾಡಿದ್ದರು. ಸಂಬಂಕರಬ್ಬೊರ ಮದುವೆಗೆ ಮಂಡ್ಯಕ್ಕೆ ಹೊಗಬೇಕಾಗಿದ್ದರಿಂದ ಮಮತಾ ಕೊಟ್ಟಿಗೆ ಪಾಳ್ಯದಿಂದ ಮಾರುತಿನಗರದಲ್ಲಿನ ತವರು […]