ಜಾಮೀನು ಸಿಕ್ಕ ಬೆನ್ನಲ್ಲೇ ಮಾಡಾಳ್ ಪ್ರತ್ಯಕ್ಷ, ಅಭಿಮಾನಿಗಳಿದ ಹೂಹಾರ, ಜೈಕಾರ

ಚನ್ನಗಿರಿ,ಮಾ.7- ನಾನು ಯಾವುದೇ ಅಕ್ರಮ ಹಣ ಸಂಪಾದಿಸಿಲ್ಲ. ನನ್ನ ಮನೆಯಲ್ಲಿ ಸಿಕ್ಕ ಹಣ ಕ್ರಷರ್ ಉದ್ಯಮದಿಂದ ಹಾಗೂ ಅಡಿಕೆ ಮಾರಿ ಬಂದ ಆದಾಯವಾಗಿದ್ದು, ಅದಕ್ಕೆ ಸೂಕ್ತ ದಾಖಲೆ ಇದೆ. ಅದನ್ನು ಸಲ್ಲಿಸುತ್ತೇನೆ. ಲಂಚ ಪ್ರಕರಣದಲ್ಲಿ ನಾನು ಸಂಪೂರ್ಣ ನಿರ್ದೋಷಿ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಪುತ್ರ ಪ್ರಶಾಂತ್ ಮಾಡಾಳ್ ಅವರ ಕಚೇರಿ ಮೇಲೆ ನಡೆದ ದಾಳಿ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಸುಮಾರು 2 ಕೋಟಿ ಹಣ ವಶಪಡಿಸಿಕೊಂಡಿದ್ದರು. ಇದೇ ವೇಳೆ ಸದಾಶಿವನಗರದಲ್ಲಿರುವ ಅವರ ನಿವಾಸದ […]
ಇಬ್ಬರು ಉಗ್ರರಿಗೆ ಜಾಮೀನು ನೀಡಿದ ಅಲಹಾಬಾದ್ ಹೈಕೋರ್ಟ್

ಪ್ರಯಾಗ್‍ರಾಜ್,ಮಾ.4- ದೇಶದ ವಿರುದ್ಧ ಸಂಚು ಹಾಗೂ ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ನೀಡಿದ್ದ ಇಬ್ಬರು ಉಗ್ರರಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಾಮೀನಿನ ಮೇಲೆ ಬಿಡುಗಡೆಗೊಂಡ ಭಯೋತ್ಪಾದಕರನ್ನು ಮಹಮ್ಮದ್ ಮುಸ್ತಕೀಮ್ ಹಾಗೂ ಮಹಮ್ಮದ್ ಶಕೀಲ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಉಗ್ರರು ಪಾಕ್ ಮೂಲದ ಅಲ್-ಖೈದಾಗೆ ಸಂಘಟನೆಯ ಸಹ ಸಂಘಟನೆಯಾಗಿ ಗುರುತಿಸಿಕೊಂಡಿದ್ದ ಅನ್ಸಾರ್ ಘಜ್ವತ್ -ಉಲï-ಹಿಂದ್ ನ ಸದಸ್ಯರು ಎಂದು ಶಂಕಿಸಲಾಗಿದೆ. ನ್ಯಾಯಮೂರ್ತಿಗಳಾದ ಎ ಆರ್ ಮಸೂದಿ ಮತ್ತು ಒ ಪಿ ಶುಕ್ಲಾ ಅವರಿದ್ದ ಪೀಠವು ಆರೋಪಿಗಳಿಗೆ […]
ರಾಜೀವ್ ಗಾಂಧಿ ಫೌಂಡೇಷನ್‌ಗೆ ಚೀನಾದಿಂದ ಆರ್ಥಿಕ ನೆರವು

ನವದೆಹಲಿ,ಡಿ.13- ತವಾಂಗ್ ಪ್ರದೇಶದಲ್ಲಿ ಚೀನಾ-ಭಾರತ ಸಂಘರ್ಷವನ್ನು ಮುಂದಿಟ್ಟುಕೊಂಡು ಸಂಸತ್‍ನಲ್ಲಿ ಗದ್ದಲ ಎಬ್ಬಿಸಿದ ಕಾಂಗ್ರೆಸ್ ಹಾಗೂ ಇತರ ಪಕ್ಷಗಳಿಗೆ ಕೇಂದ್ರ ಗೃಹಸಚಿವ ಅಮಿತ್ ಷಾ ತಿರುಗೇಟು ನೀಡಿದ್ದು, ಕಾಂಗ್ರೆಸ್ ಪಕ್ಷದ ರಾಜೀವ್ ಗಾಂಧಿ ಫೌಂಡೇಷನ್ ಚೀನಾ ರಾಯಭಾರಿ ಕಚೇರಿಯಿಂದ 1.35 ಕೋಟಿ ರೂ. ಹಣಕಾಸು ನೆರವು ಪಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 2005ರಿಂದ 2007ರ ನಡುವೆ ರಾಜೀವ್‍ಗಾಂಧಿ ಫೌಂಡೇಷನ್ ಆರ್ಥಿಕ ನೆರವು ಪಡೆದಿದೆ. ಇದು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‍ಸಿಆರ್‍ಎ) ಸಮರ್ಪಕವಾಗಿಲ್ಲ. ಈ ಕಾರಣಕ್ಕೆ ಫೌಂಡೇಷನ್‍ನ […]