ಇಡಿ ಅಧಿಕಾರಿಗಳಿಂದ ಮತ್ತೆ ಸಿಸೋಡಿಯಾ ವಿಚಾರಣೆ

ನವ ದೆಹಲಿ,ಮಾ.9- ಅಬಕಾರಿ ನೀತಿ ಅಕ್ರಮಗಳ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿ ತಿಹಾರ್ ಜೈಲಿನಲ್ಲಿರುವ ಎಎಪಿ ಮುಖಂಡ ಮನೀಶ್ ಸಿಸೋಡಿಯಾ ಅವರನ್ನು ಇಂದು ಇಡಿ ಅಧಿಕಾರಿಗಳು ಎರಡನೇ ಸುತ್ತಿನ ವಿಚಾರಣೆಗೊಳಪಡಿಸಿದರು. ಮೊನ್ನೆಯಷ್ಟೇ ಸಿಸೋಡಿಯಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದ ಇಡಿ ಅಧಿಕಾರಿಗಳು ಇಂದು ಮತ್ತೆ ಹಲವಾರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. 2021-22ರ ದೆಹಲಿ ಮದ್ಯ ಅಥವಾ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಫೆಬ್ರವರಿ 26 ರಂದು ಸಿಬಿಐ […]