ಅರ್ಚಕರ ಮೇಲಿನ ದೌರ್ಜನ್ಯವನ್ನು ದಲಿತ ದೌರ್ಜನ್ಯ ಕಾಯ್ದೆ ವ್ಯಾಪ್ತಿಗೊಳಪಡಿಸಲು ಆಗ್ರಹ

ಜೈಪುರ,ಮಾ.12- ಅರ್ಚಕರ ಮೇಲಿನ ದೌರ್ಜನ್ಯಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡಿಸಿ ಜಾಮೀನು ರಹಿತ ಅಪರಾಧವೆಂದು ಪರಿಗಣಿಸುವಂತೆ ಬ್ರಾಹ್ಮಣ ಸಮುದಾಯ ಆಗ್ರಹಿಸಿದೆ. ರಾಜಸ್ಥಾನ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ನಡೆಯುವ ಚುನಾವಣೆಗೂ ಮುನ್ನ ಎಲ್ಲಾ ಪ್ರಮುಖ ಸಮುದಾಯಗಳು ತಮ್ಮ ಪ್ರಾಬಲ್ಯವನ್ನು ತೋರಿಸಲು ಮತ್ತು ರಾಜಕೀಯ ಪ್ರಾತಿನಿಧ್ಯ ಪಡೆಯಲು ಜಾತಿ ಆಧಾರಿತ ಸಾಮೂಹಿಕ ಸಭೆಗಳನ್ನು ನಡೆಸಲಾರಂಭಿಸಿವೆ. ಈ ಮೊದಲು ಮಾರ್ಚ್ 5 ರಂದು ಜೈಪುರದಲ್ಲಿ ಜಾಟ್ ಸಮುದಾಯದ ಬೃಹತ್ ಸಭೆ ನಡೆದಿತ್ತು, ಅಲ್ಲಿ ಆಡಳಿತ ಮತ್ತು ವಿರೋಧ […]

ವಿಧ್ವಂಸಕ ಕೃತ್ಯ ನಡೆಸಲು ಮೋದಿ ಅಧಿಕಾರಾವಧಿಯಲ್ಲಿ ಅವಕಾಶವಿಲ್ಲ : ಸಿಎಂ ಬೊಮ್ಮಾಯಿ

ಬೆಂಗಳೂರು,ಸೆ.28- ದೇಶದಲ್ಲಿ ಯಾವುದೇ ಸಂಘಟನೆಗಳು ಕಾನೂನು ಬಾಹಿರವಾಗಿ ಚಟುವಟಿಕೆ ನಡೆಸುವುದು, ವಿಧ್ವಂಸಕ ಕೃತ್ಯ ನಡೆಸಲು ಪ್ರಧಾನಿ ನರೇಂದ್ರಮೋದಿ ಅವರ ಅಧಿಕಾರಾವಧಿಯಲ್ಲಿ ಅವಕಾಶವಿಲ್ಲ ಎಂಬುದನ್ನು ಮತ್ತೊಂದು ಬಾರಿ ಸಾಬೀತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಪಿಎಫ್‍ಐ ಸಂಘಟನೆಯನ್ನು ನಿಷೇಧ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಕಾನೂನು ಬಾಹಿರ ಚಟುವಟಿಕೆ ನಡೆಸುವ ಸಂಘಟನೆಗಳನ್ನು ಬಗ್ಗು ಬಡಿಯಲು ಪ್ರಧಾನಿ ನರೇಂದ್ರಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಸಮರ್ಥರಾಗಿದ್ದಾರೆ. ಪಿಎಫ್‍ಐ ಹಾಗೂ ಅದರ ಸಂಘಟನೆಗಳಿಗೆ […]

ಎರಡು ರೌಡಿ ಗುಂಪುಗಳ ನಡುವೆ ಬಾರ್ ನಲ್ಲಿ ಬಡಿದಾಟ

ಬೆಂಗಳೂರು, ಜು.17- ಬಾರ್‍ನಲ್ಲಿ ಎರಡು ಗುಂಪಿನ ರೌಡಿಗಳು ಮದ್ಯದ ಬಾಟಲಿನಿಂದ ಹೊಡೆದಾಡಿಕೊಂಡಿರುವ ಘಟನೆ ಉಪ್ಪಾರ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸವೆನ್ ಹಿಲ್ ಬಾರ್‍ನಲ್ಲಿ ನಡೆದಿದೆ. ಮಧ್ಯ ರಾತ್ರಿ ನಡೆದ ಈ ಘಟನೆಯಲ್ಲಿ ಶ್ರೀರಾಂಪುರದ ರೌಡಿ ಶೀಟರ್ ರಾಘವೇಂದ್ರ ಹಾಗೂ ರಾಜರಾಜೇಶ್ವರಿ ನಗರದರೌಡಿ ಶೀಟರ್ ಯಶವಂತ್ ಮತ್ತು ಇತರರಿಗೆ ಗಾಯಗಳಾಗಿವೆ. ಕಳೆದ ರಾತ್ರಿ ಈ ಎರಡು ರೌಡಿಗಳ ಗುಂಪಿನ ಸದಸ್ಯರು ಮದ್ಯ ಸೇವಿಸಲು ಗಾಂಧಿನಗರದ ಬಾರ್‍ಗೆ ಬಂದಿದ್ದಾರೆ. ಸುಮಾರು 12.30 ಸಂದರ್ಭದಲ್ಲಿ ಬಾತ್‍ರೂಂ ಗೆ ಹೋದ ರೌಡಿ […]

ಬೆಂಗಳೂರು ಸೇರಿ ದೇಶದ ಹಲವೆಡೆ ರಿಯಲ್ ಎಸ್ಟೇಟ್ ಕಂಪೆನಿಗಳ ಮೇಲೆ ಐಟಿ ರೇಡ್

ನವದೆಹಲಿ,ಜು.12- ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿದಂತೆ ಸುಮಾರು 40 ಕಡೆ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಸುಮಾರು 400 ಕೋಟಿ ರೂ.ಗೂ ಅಧಿಕ ಮೌಲ್ಯದ ಆದಾಯ ಮೀರಿದ ಆಸ್ತಿಯನ್ನು ಪತ್ತೆಹಚ್ಚಿರುವುದಾಗಿ ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಸೋಮವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 350 ಕೋಟಿ ರೂ. ನಗದು, 18.50 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಪತ್ತೆಹಚ್ಚಲಾಗಿದೆ. ದಾಳಿ ನಡೆಸಲಾದ ಸಂಸ್ಥೆಯ ಹೆಸರನ್ನು ಬಹಿರಂಗ ಪಡಿಸದ ಆದಾಯ […]