ಅನಾಮಧೇಯ ವ್ಯಕ್ತಿಗಳಿಗೆ ಕುಮಾರ ಕೃಪಾ ಪ್ರವೇಶ ನಿರ್ಬಂಧ

ಬೆಂಗಳೂರು,ಜ.10- ರಾಜ್ಯ ರಾಜಕಾರಣದಲ್ಲಿ ತೀವ್ರ ವಿವಾದದ ಕೇಂದ್ರಬಿಂದುವಾಗಿರುವ ರಾಜಧಾನಿ ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಕುಮಾರಕೃಪ ಅತಿಥಿಗೃಹಕ್ಕೆ ಅನಾಮಧೇಯ ವ್ಯಕ್ತಿಗಳ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ. ಕುಮಾರಕೃಪ ಅತಿಥಿ ಗೃಹಕ್ಕೆ ಯಾರೇ ಬಂದರೂ ಕಡ್ಡಾಯವಾಗಿ ತಮ್ಮ ಗುರುತಿನಚೀಟಿ ತೋರಿಸಲೇಬೇಕು. ಎಲ್ಲಿಂದ ಬಂದಿದ್ದೇವೆ? ಯಾರನ್ನು ಭೇಟಿಯಾಗಬೇಕು? ಯಾವ ಕೆಲಸ? ಎಷ್ಟು ದಿನ ಉಳಿದುಕೊಳ್ಳುತ್ತೇವೆ, ಬಂದುಹೋಗುವ ಸಮಯ, ಆಗಮನ-ನಿರ್ಗಮನದ ಸಮಯದ ಮಾಹಿತಿಯನ್ನು ಸಂಬಂಧಪಟ್ಟವರಿಗೆ ತಿಳಿಸಲೇಬೇಕು. ಕುಮಾರಕೃಪದ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ದೇವರಾಜ್ ಅವರನ್ನು ಶನಿವಾರ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿತ್ತು. ತೆರವಾಗಿದ್ದ ಈ ಸ್ಥಾನಕ್ಕೆ […]

ಕುಮಾರ ಕೃಪ ಅತಿಥಿ ಗೃಹದ ಸಹಾಯಕ ಪ್ರಧಾನ ವ್ಯವಸ್ಥಾಪಕ ಎತ್ತಂಗಡಿ

ಬೆಂಗಳೂರು,ಜ.7- ಕುಮಾರ ಕೃಪ ಅತಿಥಿ ಗೃಹದ ಸಹಾಯಕ ಪ್ರಧಾನ ವ್ಯವಸ್ಥಾಪಕ ದೇವರಾಜ್ ಎಚ್.ಎಸ್.ಅವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ. ರೌಡಿ ಶೀಟರ್ ಸ್ಯಾಂಟ್ರೋ ರವಿಗೆ ಕುಮಾರ ಕೃಪ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಲು ಅವಕಾಶ ಕಲ್ಪಿಸಿಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿದ್ದ ದೇವರಾಜ್ ಎಚ್.ಎಸ್. ಅವರನ್ನು ವರ್ಗಾವಣೆ ಮಾಡಲಾಗಿದೆ. ಮುಂದಿನ ಆದೇಶದವರೆಗೂ ದೇವರಾಜ್ ಅವರನ್ನು ಕೇಂದ್ರ ಕಚೇರಿಯಲ್ಲಿ ವರದಿ ಮಾಡಿಕೊಳ್ಳಬೇಕೆಂದು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸೂಚಿಸಿದ್ದಾರೆ. ಮೂರು ದಿನಗಳ […]