ಗುಜರಾತ್‍ನ ಅಮೇಲಿಯಲ್ಲಿ 2 ವರ್ಷದಲ್ಲಿ 400 ಬಾರಿ ಭೂಕಂಪ..!

ಅಹಮದಾಬಾದ್,ಫೆ.26- ಕಳೆದ ಎರಡು ವರ್ಷಗಳಲ್ಲಿ 400ಕ್ಕೂ ಹೆಚ್ಚು ಲಘು ಕಂಪನದ ಮೂಲಕ ಗುಜರಾತ್‍ನ ಅಮ್ರೇಲಿ ಜಿಲ್ಲೆಯ ಮಿಟಿಯಾಲ ಗ್ರಾಮ ಭೂಕಂಪದ ಸಮೂಹ ಕೇಂದ್ರ ಬಿಂಧುವಾಗಿ ಮಾರ್ಪಟ್ಟಿದೆ. ಸಾಮಾನ್ಯವಾಗಿ ಅಲ್ಪಾವಯ ಸಣ್ಣ ಭೂಕಂಪಗಳ ಅನುಕ್ರಮವಾಗಿ ದಿನಗಳು, ವಾರಗಳು ಅಥವಾ ಕೆಲವೊಮ್ಮೆ ತಿಂಗಳುಗಳವರೆಗೆ ಮುಂದುವರಿಯಬಹುದು ಅಥವಾ ಒಂದೇ ಸ್ಥಳದಲ್ಲಿ ಪದೇ ಪದೇ ಮರುಕಳಿಸಬಹುದು. 400ಕ್ಕೂ ಹೆಚ್ಚಿನ ಕಂಪನಗಳನ್ನು ಅನುಭವಿಸಿದ ಮಿಟಿಯಾಲ ಗ್ರಾಮಸ್ಥರು ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ಮನೆಗಳ ಹೊರಗೆ ಮಲಗಲು ಪ್ರಾರಂಭಿಸಿದ್ದಾರೆ. ಸ್ಥಳೀಯ ನಿವಾಸಿ ಮಹಮ್ಮದ್ ರಾಥೋಡ್ ಮಾತನಾಡಿ, ಕಂಪನದ […]

ಬ್ರೇಕಿಂಗ್ : ಕೊನೆಗೂ ಸ್ಯಾಂಟ್ರೋ ರವಿ ಅರೆಸ್ಟ್..!

ಬೆಂಗಳೂರು : ಬಾರಿ ಕುತೂಹಲ ಕೆರಳಿಸಿದ್ದ ಲೈಂಗಿಕ ದೌರ್ಜನ್ಯ , ಡೀಲಿಂಗ್ ಹಾಗೂ ವಂಚನೆ ಪ್ರಕರಣದಲ್ಲಿ ಸ್ಯಾಂಟ್ರೋ ರವಿಯನ್ನು ಗುಜರಾತ್ ನಲ್ಲಿ ಇಂದು ಬಂಧಿಸಲಾಗಿದೆ. ಮೈಸೂರಿನಲ್ಲಿ ರವಿಯ ಎರಡನೇ ಪತ್ನಿ ನೀಡಿದ ದೂರಿನ ನಂತರ ತಲೆಮರಸಿಕೊಂಡಿದ್ದ ಈತನ ಬಂಧನಕ್ಕಾಗಿ ಪೊಲೀಸರು ಬಾರಿ ಪ್ರಯಾಸ ಪಟ್ಟಿದ್ದರು. ನೆರೆಯ ಮಹಾರಾಷ್ಟ್ರ ಕೇರಳ ಹಾಗೂ ರಾಜ್ಯದ ನಾನಾ ಭಾಗಗಳಲ್ಲಿ ಅಡಗು ತಾಣಗಳ ಮೇಲೆ ಪೊಲೀಸರು ಕಾರ್ಯಚರಣೆ ನಡೆಸಿದ್ದರು. ಆದರೆ ಆತ ಗುಜರಾತ್ ನಲ್ಲಿ ತಲೆಮರೆಸಿಕೊಂಡಿರೋ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರ […]

ಅವಧಿಗೂ ಮುನ್ನ ಅಪರಾಧಿಗಳ ಬಿಡುಗಡೆ ಪ್ರಶ್ನಿಸಿದ್ದ ಬಲ್ಕೀಸ್ ಬಾನು ಅರ್ಜಿ ವಜಾ

ನವದೆಹಲಿ,ಡಿ.17- ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಗಳನ್ನು ಅವಧಿಗೂ ಮುನ್ನಾ ಬಿಡುಗಡೆ ಮಾಡಿದ ಆದೇಶ ಮರು ಪರಿಶೀಲಿಸುವಂತೆ ಕೋರಿದ್ದ ಸಂತ್ರಸ್ಥೆ ಬಲ್ಕೀಸ್ ಬಾನು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. 2002ರ ಗುಜರಾತ್ ಗಲಭೆಗೆ ಸಂಬಂಸಿದಂತೆ ಶಿಕ್ಷೆಗೆ ಗುರಿಯಾಗಿದ್ದ 11 ಮಂದಿ ಅಪರಾಗಳನ್ನು ಕಳೆದ ಆಗಸ್ಟ್ ನ 15ರಂದು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. 2022ರ ಮೇನಲ್ಲಿ ಸುಪ್ರೀಂಕೋರ್ಟ್ ಅಪರಾಗಳ ಬಿಡುಗಡೆ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ವಹಿಸಿದ್ದನ್ನು ಬಲ್ಕೀಸ್ ಬಾನು ಪ್ರಶ್ನಿಸಿದ್ದರು. ಇದನ್ನು […]

ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ(LiVE)

ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ# ಒಟ್ಟು ಸ್ಥಾನಗಳು : 182 (ಸರಳ ಬಹುತಮತ-92)➤ ಬಿಜೆಪಿ : 157➤ ಕಾಂಗ್ರೆಸ್ : 16➤ ಎಎಪಿ : 05➤ ಇತರೆ : 04 ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ # ಒಟ್ಟು ಸ್ಥಾನಗಳು : 68 (ಸರಳ ಬಹುತಮತ-35)➤ ಬಿಜೆಪಿ : 26➤ ಕಾಂಗ್ರೆಸ್ : 39➤ ಎಎಪಿ : 00➤ಇತರೆ : 03 ಅಹಮದಾಬಾದ್,ಡಿ.8– ಗುಜರಾತ್‍ನ ಇತಿಹಾಸದಲ್ಲೇ ಶೇ.50ಕ್ಕಿಂತಲೂ ಹೆಚ್ಚಿನ ಮತ ಪಡೆದ ಬಿಜೆಪಿ 150 ಸ್ಥಾನಗಳಲ್ಲಿ […]

ಗುಜರಾತ್ ಕೈ ಶಾಸಕನ ಮೇಲೆ ಬಿಜೆಪಿ ಗುಂಪು ದಾಳಿ

ಅಹಮದಾಬಾದ್,ಡಿ.5-ಗುಜರಾತ್‍ನಲ್ಲಿ ತಮ್ಮ ಶಾಸಕರೊಬ್ಬರ ಮೇಲೆ ಬಿಜೆಪಿ ನೇತೃತ್ವದ ಗುಂಪೊಂದು ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಆದರೆ, ಈ ಆರೋಪಕ್ಕೆ ಬಿಜೆಪಿ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ನಮ್ಮ ಶಾಸಕರೊಬ್ಬರು ನಾಪತ್ತೆಯಾಗಿದ್ದಾರೆ ಎಂದು ರಾಹುಲ್‍ಗಾಂಧಿ ನಿನ್ನೆ ಮಧ್ಯರಾತ್ರಿ ಟ್ವಿಟ್ ಮಾಡಿದ್ದರು ಮಾತ್ರವಲ್ಲ ಬಿಜೆಪಿ ನೇತೃತ್ವದ ಗುಂಪೊಂದು ಕತ್ತಿಗಳಿಂದ ಶಾಸಕರ ಮೇಲೆ ಹಲ್ಲೆ ನಡೆಸಿ ಇಂದು ಬೆಳಿಗ್ಗೆ ಕಾಡಿನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಬನಸ್ಕಾಂತದ ದಾಂಟಾದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ರ್ಪಧಿಸಿರುವ ಕಾಂತಿ ಖರಾಡಿ ಅವರು […]