ಗುಜರಾತ್, ರಾಜಸ್ಥಾನ ಹೆಚ್ಚು ಹಿಂದುಳಿದ ರಾಜ್ಯಗಳು : ಸಚಿವ ಮಾಧುಸ್ವಾಮಿ

ಬೆಂಗಳೂರು,ಮಾ.9-ಗುಜರಾತ್, ರಾಜಸ್ಥಾನ ಹೆಚ್ಚು ಮರುಭೂಮಿ ಹೊಂದಿದ್ದು, ಹಿಂದುಳಿದ ರಾಜ್ಯಗಳಾಗಿವೆ ಎಂದು ಕಾನೂನು ಸಚಿವ ಮಾಧುಸ್ವಾಮಿ ವಿಧಾನಸಭೆಗೆ ತಿಳಿಸಿದರು. 2022-23ನೇ ಸಾಲಿನ ಆಯವ್ಯಯ ಅಂದಾಜು ಮೇಲು ಎಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಾ, ಕೇಂದ್ರದ ಅನುದಾನದ ತಾರತಮ್ಯದ ವಿಚಾರ ಪ್ರಸ್ತಾಪಿಸಿದಾಗ ಮಧ್ಯಪ್ರವೇಶಿಸಿದ ಮಾಧುಸ್ವಾಮಿಯವರು, ಹಿಂದುಳಿದ ರಾಜ್ಯಗಳ ಅಭಿವೃದ್ದಿಗೆ ಕೇಂದ್ರ ಸರ್ಕಾರ ಹೆಚ್ಚು ಅನುದಾನ ಕೊಡುತ್ತದೆ. ಎಲ್ಲರಿಗೂ ಸಮಾನವಾಗಿ ಹಂಚಬೇಕಿಂದಿಲ್ಲ. ಅದು ಸಂವಿಧಾನದಲ್ಲೂ ಹೇಳಿಲ್ಲ ಎಂದರು. ಆಗ ಶಾಸಕ ಎ.ಟಿ.ರಾಮಸ್ವಾಮಿ, ಗುಜರಾತ್ ಅತಿ ಹಿಂದುಳಿದಿದೆಯೇ ಅದಕ್ಕೆ ಹೆಚ್ಚು ಅನುದಾನ ಕೊಡುತ್ತಿಲ್ಲವೇ ಎಂದು ಪ್ರಶ್ನಿಸಿದಾಗ, ಹೌದು […]