ಗುಜರಾತ್ ಮಾದರಿ ಟಿಕೆಟ್ ಹಂಚಿಕೆ, 20 ಶಾಸಕರಿಗೆ ಕೋಕ್

ಬೆಂಗಳೂರು,ಡಿ.9- ಪ್ರಧಾನಿ ನರೇಂದ್ರಮೋದಿಯವರ ತವರು ರಾಜ್ಯ ಗುಜರಾತ್‍ನಲ್ಲಿ ಭರ್ಜರಿ ಗೆಲುವು ಸಾಧಿಸಿ ಆತ್ಮವಿಶ್ವಾಸದಲ್ಲಿರುವ ಬಿಜೆಪಿ, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಹಿರಿಯ ತಲೆಗಳು ಹಾಗೂ ವಿರೋಧಿ ಅಲೆ ಎದುರಿಸುತ್ತಿರುವರಿಗೆ ಕೋಕ್ ನೀಡುವುದು ಬಹುತೇಕ ಖಚಿತವಾಗಿದೆ. ರಾಜ್ಯದಲ್ಲೂ ಗುಜರಾತ್ ಮಾದರಿಯಂತೆಯೇ ಚುನಾವಣೆ ನಡೆಸಬೇಕೆಂಬ ಕೂಗು ಎದ್ದಿದ್ದು, ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಹೆಚ್ಚಾಗುತ್ತಿದೆ. ಸಚಿವ ಸ್ಥಾನಕ್ಕಾಗಿ ಪಕ್ಷಕ್ಕೆ ಬಂದವರಿಗೆ ಟಿಕೆಟ್ ನೀಡದೆ, ಪಕ್ಷದ ಬಾವುಟ ಕಟ್ಟುವವರಿಗೆ ಚುನಾವಣೆ ಯಲ್ಲಿ ಸ್ರ್ಪಧಿಸಲು ಅವಕಾಶ ಕೊಡಬೇಕೆಂಬ ಬೇಡಿಕೆ ಕೇಳಿಬರುತ್ತಿರುವುದರಿಂದ ಎರಡು ಡಜನ್‍ಗೂ […]